ಹೇಗೆ ಮಾಡೋದು?
ಮೊದಲು ಬಾಣಲೆಗೆ ಎಣ್ಣೆ ಕಾಳುಮೆಣಸು, ಚಕ್ಕೆ, ಲವಂಗ ಹಾಗೂ ಈರುಳ್ಳಿ ಹಾಕಿ ಬಾಡಿಸಿ, ಹಸಿಮೆಣಸು ಹಾಕಿ ಬಾಡಿಸಿ ತಣ್ಣಗಾದ ಮೇಲೆ ರುಬ್ಬಿ ಇಡಿ
ನಂತರ ಮಿಕ್ಸಿಗೆ ಪುದೀನಾ, ಕೊತ್ತಂಬರಿ ಸೊಪ್ಪು, ಶುಂಠಿ ಹಾಗೂ ಬೆಳ್ಳುಳ್ಳಿ, ಹಸಿಮೆಣಸು ಹಾಕಿ ಮಿಕ್ಸಿ ಮಾಡಿ ಇಡಿ
ಪಾತ್ರೆಗೆ ಮೊಸರು, ಖಾರದಪುಡಿ, ಸಾಂಬಾರ್ ಪುಡಿ ಹಾಗೂ ಉಪ್ಪು ಹಾಕಿ, ಇದಕ್ಕೆ ಮಶ್ರೂಮ್ ಹಾಕಿ ಮ್ಯಾರಿನೇಟ್ ಮಾಡಿ ಇಡಿ.
ನಂತರ ಕುಕ್ಕರ್ಗೆ ಎಣ್ಣೆ ಚಕ್ಕೆ, ಲವಂಗ, ಏಲಕ್ಕಿ ಹಾಕಿ ಮಿಕ್ಸ್ ಮಾಡಿ, ನಂತರ ಈರುಳ್ಳಿ, ಹಸಿಮೆಣಸು ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ, ಉಪ್ಪು ಹಾಕಿ
ನಂತರ ಈರುಳ್ಳಿ ಪೇಸ್ಟ್, ಹಸಿಮೆಣಸು ಪೇಸ್ಟ್ ಹಾಕಿ ಮಿಕ್ಸ್ ಮಾಡಿ, ನಂತರ ಮಶ್ರೂಮ್ ಹಾಕಿ, ಎಣ್ಣೆ ಬಾಡುವವರೆಗೂ ಸಾಟೆ ಮಾಡಿ
ನಂತರ ನೀರು ಹಾಗೂ ಅಕ್ಕಿ ಹಾಕಿ, ಮೇಲೆ ಒಂದು ಸ್ಪೂನ್ ತುಪ್ಪ ಹಾಕಿ ವಿಶಲ್ ಕೂಗಿಸಿದ್ರೆ ಪಲಾವ್ ರೆಡಿ