ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಪ್ಪು ಹಂದಿಯನ್ನು ಚೀನಾಗೆ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ಅರಣ್ಯದಲ್ಲಿ ಚಿಪ್ಪು ಹಂದಿ ಬೇಟೆಯಾಡಿ ಕೋಲ್ಕತ್ತಾಗೆ ರೈಲಿನಲ್ಲಿ ಸಾಗಿಸಲು ಯತ್ನಿಸಿದ ಖದೀಮರು ಸಿಕ್ಕಿಬಿದ್ದಿದ್ದಾರೆ. ಅವರು ಚಿಪ್ಪು ಹಂದಿಯನ್ನು ಕೊಲ್ಕತ್ತಾಗೆ ಸಾಗಿಸಿ ನಂತರ ಚೀನಾಗೆ ಸಾಗಿಸಲು ಪ್ರಯತ್ನಿಸಿದ್ದರು.
6 ವರ್ಷದ ಚಿಪ್ಪು ಹಂದಿಯನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು ಮಾಲು ಸಮೇತ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಪುರುಷತ್ವ ಚಿಕಿತ್ಸೆಗೆ ಚಿಪ್ಪು ಹಂದಿ ಪ್ರಯೋಜನಕಾರಿಯಾಗಿದ್ದು ಚೀನಾದಲ್ಲಿ ಹೆಚ್ಚಿನ ಬೇಡಿಕೆಯಿದೆ.