BIG BOSS | ನನ್ನನ್ನು ಎದುರುಹಾಕಿಕೊಂಡು ಕರ್ನಾಟಕದಲ್ಲಿ ಅದ್ಹೇಗೆ ಬಿಗ್‌ಬಾಸ್‌ ನಡಿಸ್ತೀರಾ? ಲಾಯರ್‌ ಜಗದೀಶ್‌ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೊಡ್ಮನೆಗೆ ಎಂಟ್ರಿ ಕೊಟ್ಟ ಲಾಯರ್‌ ಜಗದೀಶ್‌ ಮನೆಗೆ ಬಂದಾಗಿನಿಂದ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಬರೀ ಕಂಟೆಸ್ಟೆಂಟ್ಸ್‌ ಅಷ್ಟೆ ಅಲ್ಲ, ಬಿಗ್‌ಬಾಸ್‌ ಟೀಂನ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ಬಿಗ್​ಬಾಸ್​ ಶೋನ ವಿಡಿಯೋವೊಂದನ್ನ ರಿಲೀಸ್ ಮಾಡಲಾಗಿದ್ದು ವಿಡಿಯೋದಲ್ಲಿ ಲಾಯರ್ ಜಗದೀಶ್ ಅವರು ಅಕ್ಷರಶಃ ಕೆಂಡಕಾರಿದ್ದಾರೆ. ನಮ್ಮನ್ನ ಎದುರು ಹಾಕ್ಕೊಂಡು ಕರ್ನಾಟಕದಲ್ಲಿ ಬಿಗ್​ಬಾಸ್ ರನ್ ಮಾಡ್ತೀರಾ ಎಂದು ಗದರಿದ್ದಾರೆ.

ಅಲ್ಲದೇ ನನಗೆ ಇಲ್ಲಿ ಇರೋಕೆ ಇಷ್ಟ ಇಲ್ಲ. ಇಲ್ಲಿಂದ ಹೊರ ಹೋಗುತ್ತೇನೆ. ನಾ ಮನಸು ಮಾಡಿದರೆ ಹೆಲಿಕಾಪ್ಟರ್ ಇಲ್ಲಿಗೆ ತರಿಸುತ್ತೇನೆ. ಆ ಕೆಪಾಸಿಟಿ ನನ್ನಲ್ಲಿದೆ. ಒಳಗಡೆ ಏನೇನೂ ಮಾಫಿಗಳು ನಡೆಸುತ್ತೀರಾ ಅದೆಲ್ಲ ಎಕ್ಸ್​ಪೋಸ್ ಆಗುತ್ತೆ. ನಾನು ಸರ್ಕಾರಕ್ಕೆ ಇದನ್ನೆಲ್ಲ ಹೇಳುತ್ತೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!