ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಹಗರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾದ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಖ್ಯಾತ ತಮಿಳು ನಟ ವಿಜಯ ಸೇತುಪತಿ ನಟನೆಯ ಲೀಡರ್ ರಾಮಯ್ಯ ಸಿನಿಮಾವನ್ನು ಬೆಂಗಳೂರು ಮೂಲದ ನಿರ್ದೇಶಕ ಸತ್ಯರತ್ನಂ, ಗಂಗಾವತಿ ಮೂಲದ ಹಯ್ಯಾತ್ ಫಿರ್ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಮೈಸೂರು ಭಾಗದಲ್ಲಿ ಸಿಎಂ ಬಾಲ್ಯ ಹಾಗೂ ಶಿಕ್ಷಣ ಸೇರಿ ಹಲವು ಸನ್ನಿವೇಶಗಳ ಶೂಟಿಂಗ್ ಪೂರ್ಣವಾಗಿತ್ತು.
ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಸಿನಿಮಾ ತಂಡ ಗಮನಿಸುತ್ತಿದ್ದು, ಸದ್ಯಕ್ಕೆ ಶೂಟಿಂಗ್ ನಿಲ್ಲಿಸಿದೆ.