ತೀಯರನ್ನು ಪ್ರತ್ಯೇಕ ಸಮುದಾಯವೆಂದು ಸರಕಾರಿ ದಾಖಲೆಗಳಲ್ಲಿ ದಾಖಲಿಸಬೇಕು: ವಕೀಲ ಸದಾಶಿವ ಉಳ್ಳಾಲ್

ಹೊಸದಿಗಂತ ವರದಿ, ಕಾಸರಗೋಡು:

ಉತ್ತರ ಕೇರಳದಲ್ಲಿ ಅತ್ಯಂತ ಪ್ರಮುಖ ಹಾಗೂ ಪ್ರಬಲವಾಗಿರುವ ತೀಯಾ ಸಮುದಾಯ ಇಝವನ ಉಪಜಾತಿಯಲ್ಲದ ಕಾರಣ ತೀಯರನ್ನು ಪ್ರತ್ಯೇಕ ಸಮುದಾಯವೆಂದು ಸರಕಾರಿ ದಾಖಲೆಗಳಲ್ಲಿ ದಾಖಲಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಿದ್ಧವಾಗಬೇಕೆಂಬುದಾಗಿ ವಕೀಲ, ಮಂಗಳೂರು ಭಾರತೀಯ ಸಮಾಜದ ಅಧ್ಯಕ್ಷ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಅವರು ಹೇಳಿದರು.

ಕಾಸರಗೋಡು ಪುರಸಭಾ ಸಮ್ಮೇಳನ ಸಭಾಂಗಣದಲ್ಲಿ ತೀಯ ಮಹಾಸಭಾ ಕಾಸರಗೋಡು ಜಿಲ್ಲಾ ಸಮಿತಿಯ ತೀಯಾ ಸಮುದಾಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಪಾಲಕುನ್ನು ಕಳಕ ಶ್ರೀ ಭಗವತಿ ದೇವಸ್ಥಾನದ ಸ್ಥಾನಿಕರಾದ ಕಪ್ಪನಕ್ಕಾಲ್ ಕುಂಞಿಕಣ್ಣನ್ ಆಯತಾರ್, ತಳಂಗರ ಪುಲಿಕುನ್ನು ಶ್ರೀ ಚೀರುಂಬಾ ಭಗವತಿ ದೇವಸ್ಥಾನದ ಸ್ಥಾನಿಕರಾದ ನಾಗೇಶ ಕಾರಣವರ್ ಮತ್ತು ಚೌಕಿ ಏರಿಯಾಕೋಟ ಶ್ರೀ ಭಗವತಿ ದೇವಸ್ಥಾನದ ಸ್ಥಾನಿಕರಾದ ಚಂದ್ರಶೇಖರ ಕಾರಣವರ್ ದೀಪ ಬೆಳಗಿಸಿ ಸಭೆಗೆ ಚಾಲನೆ ನೀಡಿದರು.

ತೀಯಾ ಮಹಾ ಸಭಾ ಕಾಸರಗೋಡು ಜಿಲ್ಲಾಧ್ಯಕ್ಷ ವಿಶ್ವಂಭರನ್ ಪಣಿಕ್ಕರ್ ಅವರ ಅಧ್ಯಕ್ಷತೆಯಲ್ಲಿ ತೀಯ ಮಹಾಸಭಾದ ರಾಜ್ಯಾಧ್ಯಕ್ಷ ಗಣೇಶ್ ಅರಮಂಗಾನಂ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಮಲಬಾರ್ ದೇವಸ್ವಂ ಮಂಡಳಿ (ಕಲ್ಯಾಣ ನಿಧಿ) ಯ ಸದಸ್ಯ ಸಿ.ಕೆ.ನಾರಾಯಣ ಪಣಿಕ್ಕರ್ ಮತ್ತು ಶಿಕ್ಷಕ, ಲೇಖಕ ಮತ್ತು ವಾಗ್ಮಿ ಡಾ. ವತ್ಸನ್ ಪಿಲಿಕೋಡ್ ಮುಖ್ಯ ಭಾಷಣಗೈದರು.

ಪಾಲಕುನ್ನು ಕಳಕ ಶ್ರೀ ಭಗವತಿ ದೇವಸ್ಥಾನದಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಆಚಾರ ಸ್ಥಾನಿಕರಾಗಿ ಸೇವೆ ಸಲ್ಲಿಸುತ್ತಿರುವ ಕಪ್ಪಣಕ್ಕಾಲ್ ಕುಂಞಿಕಣ್ಣನ್ ಆಯತಾರ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಸದಾಶಿವ ಉಳ್ಳಾಲ್ ರವರ ಸುಂದರ ಥ್ರೆಡ್ ಆರ್ಟ್ ಛಾಯಾಚಿತ್ರವನ್ನು ಪೈವಳಿಕ ತೀಯಾ ಮಹಾಸಭಾ ಸದಸ್ಯ ಬೇಬಿನ್ ಡಿಎಸ್ ಅವರು ಹಸ್ತಾಂತರಿಸಿದರು.

ಪುಲಿಕುಂಜೆ ತಳೆಂಗರ ಭಗವತಿ ಸೇವಾ ಸಂಘದ ಸತೀಶ್ ಎನ್ ಮನ್ನಿಪ್ಪಾಡಿ , ಮಂಜೇಶ್ವರಂ ಬ್ಲಾಕ್ ಪಂಚಾಯತ್ ಸದಸ್ಯೆ ಅಶ್ವಿನಿ ಎಂ.ಎಲ್, ಮೊಗ್ರಾಲ್ ಪುತ್ತೂರು ಪಂಚಾಯತ್ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಮೀಳಾ ಮಜಲ್, ತೀಯಾ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಕೆ.ಲಕ್ಷ್ಮಣನ್, ರಾಜ್ಯ ಖಜಾಂಚಿ ಸಿ.ಕೆ.ಸದಾನಂದನ್, ರಾಜ್ಯ ಉಪಾಧ್ಯಕ್ಷೆ ಸೌದಾಮಿನಿ ನಾರಾಯಣನ್, ರಾಜ್ಯ ಕಾರ್ಯದರ್ಶಿ ಪ್ರೇಮಾನಂದ ನಡುತೋಡಿ, ರಾಜ್ಯ ಕಾರ್ಯದರ್ಶಿ ಸುನೀಲ್ ಕುಮಾರ್ ಚಾತಮಠ, ರಾಜ್ಯ ಪ್ರಸಾರ ಅಧ್ಯಕ್ಷ ಎನ್.ಚಂದ್ರನ್ ಪುದುಕ್ಕಾಯಿ, ಅಮ್ಮ ಭಾರತ್ ಚಾರಿಟಿ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಗಣೇಶನ್ ಮಾವಿನಕಟ್ಟೆ, ಮಹಿಳಾ ಮಹಾಸಭಾ ಜಿಲ್ಲಾಧ್ಯಕ್ಷೆ ಕೃಷ್ಣಾಬಾಯಿ, ಜಿಲ್ಲಾ ಕಾರ್ಯದರ್ಶಿ ಸುಧಾಭಾ ಚೆರುವತ್ತೂರು ವಂದಿಸಿದರು. ಜಿಲ್ಲಾ ಉಪಾಧ್ಯಕ್ಷ ಕೆ.ವಿ.ರಾಜನ್ ತೃಕರಿಪುರ ಸ್ವಾಗತಿಸಿ, ಜಿಲ್ಲಾ ಖಜಾಂಚಿ ಟಿ.ವಿ.ರಾಘವನ್ ತಿಮಿರಿ ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!