ಹೊಸದಿಗಂತ ವರದಿ,ಹುಬ್ಬಳ್ಳಿ:
ಹುಬ್ಬಳ್ಳಿ-ಅಂಕೋಲಾ, ಧಾರವಾಡ-ಬೆಳಗಾವಿ ಸೇರಿದಂತೆ ರೈಲ್ವೆ 11 ಹೊಸ ಮಾರ್ಗಗಳ ಕಾಮಗಾರಿ ಕೈಗೊಂಡಿದ್ದು, 2027 ಜೂನ್ ಒಳಗಡೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಬೇಕು ಎಂದು ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಇಲ್ಲಿಯ ಗದಗ ರಸ್ತೆ ರೈಲು ಸೌಧದಲ್ಲಿ ನೈರುತ್ಯ ರೈಲ್ವೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಗಿಣಿಗೇರಾ-ರಾಯಚೂರ, ಕಡೂರು-ಚಿಕ್ಕಮಗಳೂರು, ಬಾಗಲಕೋಟೆ-ಕುಡಚಿ, ಧಾರವಾಡ-ಬೆಳಗಾವಿ, ರಾಯದುರ್ಗ-ತುಮಕೂರು, ಗದಗ-ವಾಡಿ, ತುಮಕೂರು-ಚಿತ್ರದುರ್ಗ-ದಾವಣಗೆರೆ, ಬಾಗಲಕೋಟೆ-ಕುಡಚಿ, ಹಾಸನ-ಬೇಲೂರು, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರ, ಹೊಟಗಿ-ಕುಡ್ಗಿ-ಗದಗ ದ್ವಿಪಥ ಕಾಮಗಾರಿಗೆ ಭೂಸ್ವಾನ, ಡಿಪಿಆರ್, ಟೆಂಡರ್ ಸಂಬಂಸಿದ ಎಲ್ಲ ಸಮಸ್ಯೆ ಪರಿಹರಿಸಿಕೊಂಡು ತಕ್ಷಣ ಕಾಮಗಾರಿ ಆರಂಭಿಸಿ ಮುಗಿಸಬೇಕು ಎಂದರು.
ಹುಬ್ಬಳ್ಳಿ-ಅಂಕೋಲ ರೈಲ್ವೆ ಅರಣ್ಯ ಇಲಾಖೆ ಅನುಮತಿ ಅವಶ್ಯಕತೆ ಇದೆ. ಈಗಾಗಲೇ ಸಭೆ ನಡೆಸಿದ್ದು, ಕಾಮಗಾರಿ ಆರಂಭಿಸಲು ಒಂದು ಹಂತಕ್ಕೆ ತರಲಾಗಿದೆ. ಧಾರವಾಡ-ಬೆಳಗಾವಿ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಭೂಸ್ವಾನ ಪ್ರಕ್ರಿಯೆ ಮೂರು ತಿಂಗಳಿನಿಂದ ಆಗಿಲ್ಲ. ಆದ್ದರಿಂದ ಬೆಳಗಾವಿ ಹಾಗೂ ಧಾರವಾಡ ಜಿಲ್ಲಾಧಿಕಾರಿಗಳಿಗೆ ಭೂಸ್ವಾನ ಮಾಡಲು ಸೂಚಿಸಿದ್ದು, ಡಿಸೆಂಬರ್ ಒಳಗೆ ಮಾಡಲು ತಿಳಿಸಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ರೈಲ್ವೆ ಕಾಮಗಾರಿಗಳಿಗೆ ಶೇ. ೫೦ ರಷ್ಟು ಅನುದಾನ ನೀಡುವುದು ಬೇಡ. ಸದ್ಯಕ್ಕೆ ಅಗತ್ಯವಿರುವ ಭೂಮಿ ನೀಡಿದರೆ ಸಾಕು. ಈಗಾಗಲೇ ಮುಖ್ಯಮಂತ್ರಿ ಜೊತೆಗೆ ಭೂಸ್ವಾನ ಬಗ್ಗೆ ಚರ್ಚಿಸಲಾಗಿದ್ದು, ಮಾಡಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ವಂದೇ ಭಾರತ ಮರಳಿ ಓಡಿಸುವ ಬಗ್ಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಇದರ ಬಗ್ಗೆ ರೈಲ್ವೆ ಬೋರ್ಡ್‌ನ ಗಮನಕ್ಕೆ ತರಲಾಗುವುದು. ಇನ್ನೂ ರೈಲಿನ ವೇಗವನ್ನು ಪ್ರತಿ ತಾಸಿಗೆ 110 ಕಿಮೀದಿಂದ 130 ಕಿಮೀಗೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ, ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ಜಿಲ್ಲಾಕಾರಿ ದಿವ್ಯ ಪ್ರಭು ಹಾಗೂ ರೈಲ್ವೆಯ ಹಿರಿಯ ಅಕಾರಿಗಳು ಹಾಜರಿದ್ದರು.