ಹೊಸದಿಗಂತ ವರದಿ ವಿಜಯಪುರ:
ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ ಚಿರತೆ ಸೆರೆ ಹಿಡಿದ ಘಟನೆ ಜಿಲ್ಲೆಯ ಅಲಮೇಲ ತಾಲೂಕಿನ ಸೋಮಜಾಳ ಗ್ರಾಮದಲ್ಲಿ ನಡೆದಿದೆ.
ನಿನ್ನೆ ಮುಂಜಾನೆ ಸೋಮಜಾಳ ಸುತ್ತಮುತ್ತ ಕಂಡು ಬಂದಿದ್ದ ಚಿರತೆಯನ್ನು, 24 ಗಂಟೆಯಲ್ಲಿ ಬೋನು ಇರಿಸಿ, ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಸೆರೆ ಹಿಡಿದಿದ್ದಾರೆ.
ಸಿಂದಗಿಯ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ರಾಜೀವ್ ಬಿರಾದಾರ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾದ ಪ್ರಿಯಾಂಕ, ಎಸ್.ಎಸ್. ಬಿರಾದಾರ ಅವರ ನೇತೃತ್ವದಲ್ಲಿ ಅರಣ್ಯ ಪಾಲಕರಾದ ಚನ್ನುರ ಹಾಗೂ ಶಿವಾನಂದ ಮಡಗೊಂಡ ಹಾಗೂ ಸಿಬ್ಬಂದಿಯಿಂದ ಕಾರ್ಯಾಚರಣೆ ತಂಡ ಚಿರತೆ ಸೆರೆ ಹಿಡಿದಿದೆ. ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.