ಬೆಂಗಳೂರಿನ ಶ್ರೀ ಸೋಸಲೆ ಮಠದ ಸಂಗೀತೋತ್ಸವ: ಯುವ ಪ್ರತಿಭೆಗಳಿಂದ ಗಾಯನ

ಹೊಸದಿಗಂತ ವರದಿ, ಬೆಂಗಳೂರು: :

ಶರನ್ನವರಾತ್ರಿ ಅಂಗವಾಗಿ ಬೆಂಗಳೂರಿನ ಗಾಂಧಿ ಬಜಾರಿನ ಬೆಣ್ಣೆ ಗೋವಿಂದಪ್ಪ ಛತ್ರದಲ್ಲಿರುವ ಶ್ರೀ ಸೋಸಲೆ ವ್ಯಾಸರಾಜರ ಮಹಾ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿರುವ ಸಂಗೀತೋತ್ಸವದಲ್ಲಿ ಅ. 6ರ ಸಂಜೆ 6ಕ್ಕೆ ಮೈಸೂರಿನ ಯುವ ಪ್ರತಿಭೆ ಎ.ಆರ್. ಅಪ್ರಮೇಯ ಅವರ ಗಾಯನ ಆಯೋಜನೆಗೊಂಡಿದೆ.

ಈ ಸಂದರ್ಭದಲ್ಲಿ ಅವರು ದಾಸರ ಕೀರ್ತನೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಪಕ್ಕವಾದ್ಯದಲ್ಲಿ ಎಚ್.ಎನ್. ರಘುನಂದನ (ವಯೋಲಿನ್) ಮತ್ತು ಜ್ಯೋತ್ಸ್ನಾ ಹೆಬ್ಬಾರ್ (ಮೃದಂಗ) ಸಹಕಾರ ನೀಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!