ಹೊಸ ದಿಗಂತ ವರದಿ, ವಿಜಯಪುರ:
ವಕ್ಫ್ ಆಸ್ತಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅಪ್ಪನ ಆಸ್ತಿ ಅಲ್ಲ. ನಮ್ಮಪ್ಪನ ಆಸ್ತಿಯೂ ಅಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದರು.
ನಗರದಲ್ಲಿ ಹಮ್ಮಿಕೊಂಡ ವಕ್ಫ್ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿಯಲ್ಲಿ ಒಂದಿಷ್ಟೂ ಸರ್ಕಾರದ ಆಸ್ತಿ ಇಲ್ಲ. ಇದು ದಾನಿಗಳು ದಾನ ಮಾಡಿರುವ ಆಸ್ತಿ ಎಂದರು.
ನಮ್ಮ ಸಮಾಜಕ್ಕೆ ಒಳ್ಳೆಯದು ಆಗಲಿ ಎಂದು ದಾನ ಮಾಡಿರುವ ಆಸ್ತಿಯಾಗಿದ್ದು, ಒಂದು ಇಂಚು ಸರ್ಕಾರದ ಜಮೀನನ್ನು ತೆಗೆದುಕೊಂಡಿಲ್ಲ ಮಿಸ್ಟರ್ ಯತ್ನಾಳ್ ಎಂದು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.