ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ದೇಶದ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವಾಯುಪಡೆ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದಾಗಿ ಪ್ರತಿವರ್ಷ ಅಕ್ಟೋಬರ್ 8 ರಂದು ಭಾರತೀಯ ವಾಯುಪಡೆ ದಿನವನ್ನು ಆಚರಿಸಲಾಗುತ್ತದೆ. ಇಂದು ಪ್ರಧಾನಿ ಮೋದಿ ವಾಯುಪಡೆಯ ದಿನಾಚರಣೆಗೆ ಶುಭಾಷಯ ಕೋರಿದ್ದಾರೆ.
ನಮ್ಮ ವೀರ ವಾಯು ಯೋಧರಿಗೆ ವಾಯುಪಡೆ ದಿನದ ಶುಭಾಶಯಗಳು. ನಮ್ಮ ವಾಯುಪಡೆಯು ಅವರ ಧೈರ್ಯ ಮತ್ತು ವೃತ್ತಿಪರತೆಗಾಗಿ ಮೆಚ್ಚುಗೆ ಪಡೆದಿದೆ. ನಮ್ಮ ದೇಶವನ್ನು ರಕ್ಷಿಸುವಲ್ಲಿ ವಾಯುಪಡೆ ಯೋಧರ ಪಾತ್ರ ಅತ್ಯಂತ ಶ್ಲಾಘನೀಯವಾಗಿದೆ ಎಂದು ಹೇಳುತ್ತಾರೆ.
ಜಗತ್ತಿನ ನಾಲ್ಕನೇ ಬಲಿಷ್ಠ ಸೇನೆಯಾಗಿರುವ ಭಾರತೀಯ ವಾಯುಪಡೆ ಪ್ರಾರಂಭದಿಂದಲೂ ಅನೇಕ ಯುದ್ಧಗಳಲ್ಲಿ ಭಾಗಿಯಾಗಿದೆ. ಭಾರತವು ಸ್ವಾತಂತ್ರ್ಯ ಪಡೆದ ನಂತರದಲ್ಲಿ ಭಾರತೀಯ ವಾಯುಪಡೆಯು ಪ್ರಮುಖ ಐದು ಯುದ್ಧಗಳಲ್ಲಿ ಭಾಗಿಯಾಗಿದೆ. ಇವುಗಳಲ್ಲಿ ನಾಲ್ಕು ಯುದ್ಧಗಳು ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಿದ್ದರೆ ಒಂದು ಯುದ್ಧವು ಚೀನಾದ ನಡುವೆ ನಡೆದಿತ್ತು.
Air Force Day greetings to our brave air warriors. Our Air Force is admired for their courage and professionalism. Their role in protecting our nation is extremely commendable. pic.twitter.com/Qsb8URzmmT
— Narendra Modi (@narendramodi) October 8, 2024