ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾನು ಇಷ್ಟಪಟ್ಟ ವ್ಯಕ್ತಿಯೊಂದಿಗೆ ಮದುವೆಯಾಗಲು ಅವಕಾಶ ನೀಡದಿದ್ದಕ್ಕೆ ಯುವತಿಯೊಬ್ಬಳು ತನ್ನ ಕುಟುಂಬದ 13 ಮಂದಿಯನ್ನು ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಯುವತಿ ತನ್ನ ಕುಟುಂಬದ 13 ಸದಸ್ಯರಿಗೆ ಊಟದಲ್ಲಿ ವಿಷ ಬೆರೆಸಿ ಹತ್ಯೆ ಮಾಡಿದ್ದಾಳೆ.
ಆಕೆ ಹೇಳುವ ಪ್ರಕಾರ ಆಕೆ ಇಷ್ಟಪಟ್ಟವನ್ನು ಮದುವೆಯಾಗಲು ಅವರು ಒಪ್ಪಿರಲಿಲ್ಲ, ಖೈರಪುರ ಸಮೀಪದ ಹೈಬತ್ ಖಾನ್ ಬ್ರೋಹಿ ಗ್ರಾಮದಲ್ಲಿ ಆಗಸ್ಟ್ 19 ರಂದು ಈ ಘಟನೆ ಸಂಭವಿಸಿದೆ. ತನ್ನ ಇಷ್ಟದ ಹುಡುಗನನ್ನು ಮದುವೆಯಾಗಲು ಮನೆಯವರು ಒಪ್ಪದ ಕಾರಣ ಯುವತಿ ಕೋಪಗೊಂಡಿದ್ದಳು. ನಂತರ ತನ್ನ ಪ್ರಿಯಕರನೊಂದಿಗೆ ಸಂಚು ರೂಪಿಸಿ, ಆಕೆಯ ಪೋಷಕರು ಸೇರಿದಂತೆ ಕುಟುಂಬ ಸದಸ್ಯರಿಗೆ ವಿಷ ಉಣಿಸಿದ್ದಾಳೆ.
ಆಹಾರ ಸೇವಿಸಿದ ನಂತರ ಎಲ್ಲಾ 13 ಸದಸ್ಯರು ಅಸ್ವಸ್ಥಗೊಂಡರು ಮತ್ತು ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಎಲ್ಲರೂ ಕೊನೆಯುಸಿರೆಳೆದರು. ಮರಣೋತ್ತರ ಪರೀಕ್ಷೆ ಮಾಡಿದಾಗ ಈ ಜನರು ವಿಷಪೂರಿತ ಆಹಾರದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಇನಾಯತ್ ಶಾ ತಿಳಿಸಿದ್ದಾರೆ.