ನಮಗೆ ಈ ಓಟ್ಸ್ ಎಲ್ಲ ತಿಂಡಿ ಅನಿಸೋದಿಲ್ಲ, ರಾಗಿ ಮುದ್ದೆ, ಇಡ್ಲಿ, ದೋಸೆ, ಪಲಾವ್ ಇವೇ ಇಷ್ಟದ ತಿಂಡಿಗಳು ಅಂತೀರಾ, ಹೌದು, ಅದರ ರುಚಿ ಜೊತೆ ಕಾಂಪಿಟೇಷನ್ ಇಲ್ಲ. ಆದರೆ ಓಟ್ಸ್ ಕೂಡ ಒಂದು ಹೆಜ್ಜೆ ಮುಂದೇ ಇದೆ. ಇದರಲ್ಲಿ ಏನೆಲ್ಲಾ ಇದೆ, ಯಾಕೆ ತಿನ್ನಬೇಕು?
ಓಟ್ಸ್‌ನಲ್ಲಿ ಸಿಕ್ಕಾಪಟ್ಟೆ ನ್ಯೂಟ್ರಿಯಂಟ್ಸ್ ಇದೆ
ಇದರಲ್ಲಿ ಹೆಚ್ಚು ಆಂಟಿ ಆಕ್ಸಿಡೆಂಟ್ಸ್ ಇದೆ
ಈ ಮೀಲ್‌ನಲ್ಲಿ ಫೈಬರ್ ಕೂಡ ಇದೆ
ನಿಮ್ಮ ಕೊಲೆಸ್ಟ್ರಾಲ್ ಲೆವೆಲ್‌ನ್ನು ಕಡಿಮೆ ಮಾಡುವ ಶಕ್ತಿ ಇದೆ
ಬ್ಲಡ್ ಶುಗರ್ ಇಂಪ್ರೂವ್ ಮಾಡುತ್ತದೆ
ಹೊಟ್ಟೆ ತುಂಬಾ ತಿಂದೆ ಎನಿಸುತ್ತದೆ, ಆದರೆ ಇದರ ಕ್ವಾಂಟಿಟಿಯಿಂದ ತೂಕ ಇಳಿಕೆ ಮಾಡಬಹುದು.
ಸ್ಕಿನ್‌ಗೆ ಉತ್ತಮವಾಗಿದೆ
ಹೇಗೆ ಮಾಡೋದು?
ಓಟ್ಸ್ ಹಾಗೂ ನೀರು ಹಾಕಿ ಸ್ವಲ್ಪ ಕುದಿಸಿ, ಓಟ್ಸ್ ಬೆಂದ ನಂತರ ಸ್ವಲ್ಪ ಹಾಲು ಹಾಗೂ ಜೋನಿ ಬೆಲ್ಲ ಹಾಕಿ, ಬೇಡ ಎಂದರೆ ಆಫ್ ಮಾಡಿದ ನಂತರ ಜೇನುತುಪ್ಪ ಹಾಕಿ
ಮೇಲೆ ಸಾಕಷ್ಟು ಫ್ರೂಟ್ಸ್ ಹಾಕಿಕೊಂಡು ತಿನ್ನಬಹುದು.
ಖಾರ ಬೇಕೆಂದರೆ ಉಪ್ಪಿಟ್ ಮಾಡುವಂತೆ ಮಾಡಿ, ರವೆ ಬದಲು ಓಟ್ಸ್ ಹಾಕಿದ್ರೆ ಆಯ್ತು