ಶ್ವಾನಕ್ಕಾಗಿ ಮಿಡಿದ ಮನ.. ಬ್ರಿಟನ್​ನ ಪ್ರತಿಷ್ಠಿತ ಪ್ರಶಸ್ತಿಯನ್ನೇ ತಿರಸ್ಕರಿಸಿದ್ದ ದಿಗ್ಗಜನ ಕಥೆ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ಉದ್ಯಮ ದಿಗ್ಗಜ ರತನ್ ಟಾಟಾ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಪ್ರಾಣಿ ಪ್ರೇಮಿಯೂ ಹೌದು, ಉದ್ಯಮಿಯೂ ಹೌದು. ಆ ದಿನ, ಬ್ರಿಟನ್​ನ ರಾಜಮನೆತನ ನೀಡುವ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮ ಸಾಕು ನಾಯಿಗೋಸ್ಕರ ತಿರಸ್ಕರಿಸಿದ್ದರು. ಈ ಬಗ್ಗೆ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ಫೆಬ್ರವರಿ 6, 2018 ರಂದು, ಬಕಿಂಗ್​ಹ್ಯಾಮ್ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಬ್ರಿಟನ್ ರಾಯಲ್ ಪ್ರಿನ್ಸ್​​ ಚಾರ್ಲ್ಸ್ ಅವರು ಭಾರತೀಯ ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಲೋಕೋಪಕಾರಕ್ಕಾಗಿ ಮಾಡಿದ ಸೇವೆಗಳಿಗಾಗಿ ಜೀವಮಾನದ ಸಾಧನೆ ಪ್ರಶಸ್ತಿ ನೀಡಲು ಬಯಸಿದ್ದರು.

ರತನ್ ಟಾಟಾ ಆ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ, ಆದರೆ ಅದಕ್ಕೆ ಕಾರಣ ಅವರ ಸಾಕು ನಾಯಿ ಎಂದು ಹೇಳಿದರೆ ಆಶ್ಚರ್ಯವಾಗಬಹುದು. ಅಂಕಣಕಾರ ಸುಹೇಲ್ ಸೇಠ ಈ ಘಟನೆಯನ್ನು ಈ ಹಿಂದೆ ಯೂಟ್ಯೂಬ್ ವಿಡಿಯೋದಲ್ಲಿ ನೆನಪಿಸಿಕೊಂಡಿದ್ದರು , ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ರತನ್ ಟಾಟಾ ಏಕೆ ಹೋಗಿರಲಿಲ್ಲ ಎನ್ನುವ ಮಾಹಿತಿ ಹಂಚಿಕೊಂಡಿದ್ದರು.

ಬ್ರಿಟಿಷ್ ಏಷ್ಯನ್ ಟ್ರಸ್ಟ್ ಸಹಯೋಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಹಾಜರಾಗಲು ಫೆಬ್ರವರಿ 2 ಅಥವಾ ಫೆಬ್ರವರಿ 3 ರಂದು ಲಂಡನ್ ತಲುಪಿದ್ದೆ ಎಂದು ಸುಹೇಲ್ ಹೇಳಿದರು.

ಲಂಡನ್ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ತಮ್ಮ ಫೋನ್‌ನಲ್ಲಿ ರತನ್​ ಟಾಟಾ ಅವರ 11 ಮಿಸ್ಡ್​ ಕಾಲ್ ಇದ್ದಿದ್ದು ನೋಡಿ ಆಶ್ಚರ್ಯವಾಯಿತು. ಅವರ ಒಂದು ಸಾಕು ನಾಯಿಗೆ ತೀವ್ರ ಅನಾರೋಗ್ಯ ಕಾಡಿತ್ತು, ಅದಕ್ಕೆ ಕಾಯಿಲೆ ಇದೆ ಅದನ್ನು ಬಿಟ್ಟುಬರಲು ಸಾಧ್ಯವಿಲ್ಲ ಎಂದು ರತನ್ ಹೇಳಿದ್ದರು ಅಂತೇ. ಅವರ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ, ಪ್ರಶಸ್ತಿ ಸ್ವೀಕರಿಸಲು ಅವರು ಬಂದಿರಲಿಲ್ಲ.

ಕಾರ್ಯಕ್ರಮಕ್ಕೆ ರತನ್ ಟಾಟಾ ಬಾರದಿರುವುದರ ಹಿಂದಿನ ಕಾರಣ ಕೇಳಿ ಪ್ರಿನ್ಸ್ ಚಾರ್ಲ್ಸ್ ಮನುಷ್ಯನೆಂದರೆ ಹೀಗಿರಬೇಕು, ರತನ್ ಟಾಟಾ ಅದ್ಭುತ ವ್ಯಕ್ತಿ ಎಂದು ಹೇಳಿದ್ದರು ಎಂದು ಸುಹೇಲ್ ಸೇಠ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!