ನಾಲ್ಕು ಬಾರಿ ಪ್ರೀತಿಯಾಗಿದ್ದರೂ ಬ್ರಹ್ಮಚಾರಿಯಾಗೇ ಉಳಿದ ರತನ್‌ ಟಾಟಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರತನ್‌ ಟಾಟಾ ಫ್ಯಾಮಿಲಿ ಹೇಗಿದೆ? ಅವರ ಮಡದಿ ಯಾರು? ಅವರ ಮಕ್ಕಳು ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಎಲ್ಲರಿಗೂ ಇದ್ದದ್ದೇ. ಆದರೆ ರತನ್‌ ಟಾಟಾ ಬ್ರಹ್ಮಚಾರಿ!

ಹೌದು, ಜೀವನದಲ್ಲಿ ನಾಲ್ಕು ಬಾರಿ ಪ್ರೀತಿಯಾಗಿದ್ದರೂ ರತನ್‌ ಟಾಟಾ ಯಾರನ್ನೂ ಮದುವೆಯಾಗಲಿಲ್ಲ. ಒಂದು ಹಂತ ತಲುಪಿದ ನಂತರ ಟಾಟಾ ಮದುವೆಯ ಆಲೋಚನೆಯನ್ನೇ ಬಿಟ್ಟುಬಿಟ್ಟರು. ತಮ್ಮ ಸಂಪೂರ್ಣ ಗಮನವನ್ನು ಕಂಪನಿ ಮೇಲೆ ಹಾಕಿದರು. ಮಗುವಂತೆ ಕಂಪನಿಯನ್ನು ಬೆಳೆಸಿದರು.

ತಮ್ಮ ಪ್ರೇಮ ಜೀವನದ ಬಗ್ಗೆ ಮಾತನಾಡಿದ್ದ ರತನ್ ಟಾಟಾ, ಪ್ರೀತಿ ತನ್ನ ಜೀವನದಲ್ಲಿ ಒಂದಲ್ಲ ನಾಲ್ಕು ಬಾರಿ ಬಾಗಿಲು ತಟ್ಟಿದೆ. ಆದರೆ ಕಷ್ಟಕರ ಸಂದರ್ಭಗಳು ಹಾಗೂ ಅನಿವಾರ್ಯ ಸನ್ನಿವೇಶಗಳಿಂದಾಗಿ ಪ್ರೀತಿ-ಪ್ರೇಮ ಮದುವೆಯ ಹಂತವನ್ನು ತಲುಪಲಿಲ್ಲ ಎಂದು ಹೇಳಿದ್ದರು. ಇದಾದ ನಂತರ ಮತ್ತೆ ಮದುವೆಯ ಬಗ್ಗೆ ಯೋಚಿಸಲಿಲ್ಲ. ದೇಶದಲ್ಲಿ ಟಾಟಾ ಗ್ರೂಪ್‌ನ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸುವುದರ ಮೇಲೆ ಇಡೀ ಜೀವನವು ಸಂಪೂರ್ಣವಾಗಿ ಕೇಂದ್ರೀಕೃತವಾಗಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಮೊದಲ ಪ್ರೀತಿಯಾಗಿದ್ದು ಅಮೆರಿಕದಲ್ಲಿ, ಎರಡು ವರ್ಷದ ರಿಲೇಷನ್‌ಶಿಪ್‌, ಆ ಎರಡು ವರ್ಷಗಳು ಕಲರ್‌ಫುಲ್‌ ಆಗಿದ್ದವು. ಆಕೆಗೆ ಭಾರತಕ್ಕೆ ವಾಪಾಸಗಲು ಇಷ್ಟವಿರಲಿಲ್ಲ. ನನಗೆ ಇಷ್ಟವಿತ್ತು. ನಮ್ಮ ಸಂಬಂಧ ಅಲ್ಲಿಗೇ ಕೊನೆಯಾಯ್ತು. ಅಲ್ಲಿ ಆಕೆ ಬೇರೊಬ್ಬರನ್ನು ಮದುವೆಯಾದರು ಎಂದು ರತನ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!