ದಸರಾ, ದೀಪಾವಳಿಗೆ ಬಿಬಿಎಂಪಿ ಮಾರ್ಗಸೂಚಿ ಹೊರಡಿಸಿದೆ. ಹಬ್ಬದ ಸಮಯದಲ್ಲಿ ಹೆಚ್ಚಾಗುವ ನಗರದ ಘನತ್ಯಾಜ್ಯ ನಿರ್ವಹಣೆ ಸಂಬಂಧ ಪಾಲಿಕೆ ಅಧಿಕಾರಿಗಳಿಗೆ ಪಾಲಿಕೆ ಗೈಡ್ ಲೈನ್ ಬಿಡುಗಡೆ ಮಾಡಿದೆ. ಹಬ್ಬಗಳಲ್ಲಿ ಉತ್ಪತಿಯಾಗೋ ತ್ಯಾಜ್ಯ ನಿರ್ವಹಣೆಯ ಕುರಿತು ಸೂಚನೆ ಹೊರಡಿಸಿದೆ. ರಾಜಧಾನಿಯಲ್ಲಿ ತ್ಯಾಜ್ಯ ಸಮಸ್ಯೆಗೆ ಬ್ರೇಕ್ ಹಾಕಲು ಅಧಿಕಾರಿಗಳಿಗೆ ಗೈಡ್ ಲೈನ್ ಮೂಲಕ ಕಮಿಷನರ್ ಸೂಚನೆ ಕೊಟ್ಟಿದ್ದಾರೆ.
- ಬಾಳೇಕಂದು, ಮಾವಿನ ತೋರಣ,ಹಬ್ಬದ ವಸ್ತುಗಳಲ್ಲಿ ಹಸಿ, ಒಣ ಕಸ ವಿಂಗಡನೆಗೆ ಕ್ರಮ
- ಮಾರುಕಟ್ಟೆಗಳಲ್ಲಿ ಸ್ವಚ್ಚತೆಯ ಬಗ್ಗೆ ವ್ಯಾಪಾರಿಗಳಿಗೆ ಅರಿವು ಮೂಡಿಸಿ
- ಏಕಬಳಕೆಯ ಪ್ಲಾಸ್ಟಿಕ್ ಬಳಸದಂತೆ ನಿಗಾ-ಹಬ್ಬದಲ್ಲಿ ಉತ್ಪತಿಯಾಗೋ ಹೆಚ್ಚುವರಿ ತ್ಯಾಜ್ಯ ವಿಲೇವಾರಿಗೆ ತಯಾರಿ
- ಬ್ಲಾಕ್ ಸ್ಪಾಟ್ (ಕಸ ಸುರಿಯೋ ಜಾಗ)ಗಳಲ್ಲಿ ನಿಗಾ ಇಡಲು ಸೂಚನೆ
- ಬಾಳೆಕಂದು, ಮಾವಿನ ಸೊಪ್ಪು ಇತರೆ ವಸ್ತುಗಳನ್ನ ಹಸಿತ್ಯಾಜ್ಯ ಘಟಕಕ್ಕೆ ನೀಡುವಂತೆ ನಿಗಾ