ಏರ್ ​ಶೋ ಅಂದ್ರೆ ಟಾಟಾಗೆ ಪಂಚಪ್ರಾಣ.. ಫೈಟರ್ ಜೆಟ್​ ಓಡಿಸೋ ಕ್ರೇಜ್ ಬಂದಿದ್ದು ಹೇಗೆ?!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರತನ್ ಟಾಟಾ ಅವರು ಬೆಂಗಳೂರಿನಲ್ಲಿ ನಡೆಯುವ ಏರ್ ಶೋಗಳನ್ನು ಬಹಳ ಇಷ್ಟಪಡುತ್ತಿದ್ದರು. ಯಲಹಂಕದ ವಾಯು ನೆಲೆಯಲ್ಲಿ ನಡೆಯುವ ಏರೋ ಶೋನಲ್ಲಿ ಅವರು ಫೈಟರ್ ಜೆಟ್​ಗಳನ್ನು ಏರಿ ಹೋಗುತ್ತಿದ್ದರು. ಫೈಟರ್ ಜೆಟ್ ನಲ್ಲಿ ಕುಳಿತು ಹಾರಾಡಲು ಧೈರ್ಯವಷ್ಟೇ ಅಲ್ಲ ಕೌಶಲ್ಯವೂ ಬೇಕು. ರತನ್ ಟಾಟಾ ಅವರಿಗೆ ಅಂತಹ ರೈಡ್ ಅಂದ್ರೆ ಬಹಳ ಇಷ್ಟಪಡುತ್ತಿದ್ದರು.

ಈ ಪ್ರದರ್ಶನಗಳಲ್ಲಿ ಒಂದರಲ್ಲಿ ಅವರು F18 ಸೂಪರ್ ಹಾರ್ನೆಟ್ ಫೈಟರ್ ಜೆಟ್ ಅನ್ನು ಹಾರಿಸಿದರು. ಇದು ನಡೆದಿದ್ದು 2011ರಲ್ಲಿ.. 2020ರಲ್ಲಿ ನೆನಪಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. 9 ವರ್ಷಗಳ ಹಿಂದೆ ನಡೆದದ್ದು ಕಳೆದ 10 ವರ್ಷಗಳಲ್ಲಿ ಮರೆಯಲಾಗದ ಘಟನೆ ಎಂದು ಪೋಸ್ಟ್ ಮಾಡಿದ್ದರು.

ರತನ್ ಟಾಟಾ ಭಾರತದ ಅತ್ಯಂತ ಯಶಸ್ವಿ ಉದ್ಯಮಿ ಮಾತ್ರವಲ್ಲದೆ ಒಬ್ಬ ಮಹಾನ್ ಲೋಕೋಪಕಾರಿ ಮತ್ತು ಸಮಾಜ ಸೇವಕ. ಟಾಟಾ ಟ್ರಸ್ಟ್ ಮೂಲಕ ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ 10 ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿದ್ದರು. ಈ ಆಸ್ಪತ್ರೆಗಳು ಬಡವರಿಗೆ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಚಿಕಿತ್ಸಾ ಆಯ್ಕೆಗಳನ್ನು ಒದಗಿಸುತ್ತವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!