ವಾದ-ಪ್ರತಿವಾದ ಮುಗೀತು, ಫೈನಲ್ ರಿಸಲ್ಟ್ ಒಂದೇ ಬಾಕಿ.. ಏನಾಗುತ್ತೆ ‘ದಚ್ಚು’ ಬೇಲ್ ಭವಿಷ್ಯ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ದರ್ಶನ್ ಜಾಮೀನು ಅರ್ಜಿಯ ಭವಿಷ್ಯ ಅ.14 ರಂದು ಪ್ರಕಟವಾಗಲಿದೆ. ಸುದೀರ್ಘ ವಿಚಾರಣೆ ನಡೆಸಿದ ಸೆಷನ್ಸ್‌ ಕೋರ್ಟ್‌ ನ್ಯಾ. ಜೈಶಂಕರ್‌ ಇಂದು ವಿಚಾರಣೆ ಮುಗಿಸಿದ್ದು, ಅ. 14ರಂದು ಜಾಮೀನು ಪ್ರಕಟಿಸಲಿದ್ದಾರೆ.

ಇಂದು ದರ್ಶನ್‌ ಪರ ಹಿರಿಯ ಕ್ರಿಮಿನಲ್‌ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರೆ ಪೊಲೀಸರ ಪರವಾಗಿ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದಾರೆ.

ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರ ಪೂರ್ಣಗೊಳಿಸಿದ ನ್ಯಾಯಾಲಯ, ಅ 14 ರಂದು ತನ್ನ ನಿರ್ಧಾರವನ್ನು ಪ್ರಕಟಿಸುವುದಾಗಿ ಹೇಳಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದರೆ, ಪವಿತ್ರಾ ಗೌಡ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಬಂಧಿತರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here