ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾದಕವಸ್ತು ಕಳ್ಳಸಾಗಣೆ ವಿರುದ್ಧ ದಾಳಿ ಮುಂದುವರೆಸಿರುವ ದೆಹಲಿ ಪೊಲೀಸರು 2ನೇ ಬಾರಿಗೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೊಬ್ಬರಿ 2 ಸಾವಿರ ಕೋಟಿ ರೂ ಮೌಲ್ಯದ ಮಾದಕವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ದೆಹಲಿ ಪೊಲೀಸ್ ವಿಶೇಷ ಘಟಕವು ಗುರುವಾರ ಮತ್ತೊಂದು ಬೃಹತ್ ಮಾದಕವಸ್ತು ಕಳ್ಳಸಾಗಣೆ ಜಾಲ ಭೇದಿಸಿದ್ದು, ದೆಹಲಿಯ ರಮೇಶ್ ನಗರ ಪ್ರದೇಶದಲ್ಲಿರುವ ಗೋದಾಮಿನಿಂದ 2000 ಕೋಟಿ ರೂ. ಮೌಲ್ಯದ ಸುಮಾರು 200 ಕೆಜಿಗಳಷ್ಟು ಕೊಕೇನ್ ಅನ್ನು ವಶಪಡಿಸಿಕೊಂಡಿದೆ.
ಅಲ್ಲದೆ ತುಷಾರ್ ಗೋಯಲ್ (40), ಹಿಮಾಂಶು ಕುಮಾರ್ (27) ಮತ್ತು ಔರಂಗಜೇಬ್ ಸಿದ್ದಿಕಿ (23) ಮತ್ತು ಭರತ್ ಕುಮಾರ್ ಜೈನ್ (48) ಎಂದು ಗುರುತಿಸಲಾದ ನಾಲ್ವರನ್ನು ಸ್ಥಳದಲ್ಲೇ ಬಂಧಿಸಲಾಗಿದ್ದು, ಇಬ್ಬರನ್ನು ಅಮೃತಸರ ಮತ್ತು ಚೆನ್ನೈನಲ್ಲಿ ಬಂಧಿಸಲಾಗಿದೆ. ಉತ್ತರ ಪ್ರದೇಶದ ಹಾಪುರ್‌ನಲ್ಲಿ ಅಖ್ಲಾಕ್ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಬೆಳಗ್ಗೆ ಬಂಧಿಸಲಾಗಿದೆ.