ಹೊಸದಿಗಂತ ಡಿಜಿಲ್ ಡೆಸ್ಕ್:
ಪಾಕಿಸ್ತಾನ ಬಲೂಚಿಸ್ತಾನದಲ್ಲಿ ಬಂಧೂಕುದಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 20 ಮಂದಿ ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ಈ ಮಾಹಿತಿ ನೀಡಿದ್ದಾರೆ. ದೇಶದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಪ್ರಮುಖ ಭದ್ರತಾ ಶೃಂಗಸಭೆಗೆ ಕೆಲವು ದಿನಗಳ ಮೊದಲು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ದಾಳಿ ನಡೆದಿದೆ.
ಗುರುವಾರ ತಡರಾತ್ರಿ ದುಕಿ ಜಿಲ್ಲೆಯ ಕಲ್ಲಿದ್ದಲು ಗಣಿ ಬಳಿಯಿರುವ ಮನೆಗಳ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಬಂದೂಕುಧಾರಿಗಳು ಜನರನ್ನು ಒಟ್ಟುಗೂಡಿಸಿದರು ಮತ್ತು ನಂತರ ಅವರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಬಲಿಪಶುಗಳಲ್ಲಿ ಹೆಚ್ಚಿನವರು ಬಲೂಚಿಸ್ತಾನ ಮೂಲದವರೇ ಆಗಿದ್ದಾರೆ.
ಸತ್ತವರಲ್ಲಿ ಮೂವರು ಮತ್ತು ಗಾಯಗೊಂಡವರಲ್ಲಿ ನಾಲ್ವರು ಅಫ್ಘಾನ್ ಮೂಲದವರು ಎಂದು ಹೇಳಲಾಗಿದೆ. ಸದ್ಯ ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಈ ಪ್ರಾಂತ್ಯವು ಸ್ವಾತಂತ್ರ್ಯವನ್ನು ಬಯಸುವ ಪ್ರತ್ಯೇಕತಾವಾದಿ ಗುಂಪುಗಳ ಭದ್ರಕೋಟೆಯಾಗಿದೆ.