ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜೀನಾಮೆಯಿಂದ ತೆರವಾಗಿರುವ ಚನ್ನಪಣ್ಣಟ ಅಖಾಡದ ಉಪಚುನಾವಣೆ ಘೋಷಣೆಯಾಗುವ ಮುನ್ನವೇ ರಣರಂಗವಾಗಿ ಮಾರ್ಪಾಡಾಗುತ್ತಿದೆ. ಉಪಚುನಾವಣೆ ಘೋಷಣೆಗೆ ಇನ್ನೂ ಒಂದು ವಾರ ಬಾಕಿ ಇರುವುದನ್ನು ಗಮನಿಸಿದರೆ ಡಿಕೆಶಿ ಮತ್ತು ಹೆಚ್ಡಿಕೆ ನಡುವಿನ ಸಮರ ಜೋರಾಗಿದೆ.
ನನ್ನ ಕುಟುಂಬ ಚನ್ನಪಟ್ಟಣದಲ್ಲಿ ನಿಲ್ಲುವುದಿಲ್ಲ. ಚನ್ನಪಟ್ಟಣದ ಅಭ್ಯರ್ಥಿ ನಾನೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇನ್ನು ಇದಕ್ಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ನಾನೇ ಎನ್ಡಿಎ ಅಭ್ಯರ್ಥಿ ಎಂದು ಹೆಚ್ಡಿಕೆ ಘೋಷಿಸಿಕೊಂಡಿದ್ದಾರೆ. ಆದರೆ, ಬಿಜೆಪಿಯ ಯೋಗೇಶ್ವರ್ ಕಥೆ ಏನು ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.