ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದ ಹಿರಿಯ ನಿರ್ದೇಶಕ ಚಿ. ದತ್ತರಾಜ್ (87) ಅವರು ಇಂದು ನಿಧನ ಹೊಂದಿದ್ದಾರೆ. ಚಿ.ದತ್ತರಾಜ್ ಅವರು ಖ್ಯಾತ ಗೀತ ಸಾಹಿತಿ, ಸಂಭಾಷಾಣಕಾರ ಚಿ. ಉದಯಶಂಕರ್ ಅವರ ಸಹೋದರ.
ದತ್ತರಾಜ್ ಅವರು ರಾಜ್ಕುಮಾರ್ ಅವರ ಜೊತೆ ಸಿನಿಮಾ ಮಾಡಿದ್ದರು. ಅಣ್ಣಾವ್ರು ನಟಿಸಿದ ‘ಕೆರಳಿದ ಸಿಂಹ’, ‘ಕಾಮನಬಿಲ್ಲು’, ‘ಅದೇ ಕಣ್ಣು’, ‘ಶೃತಿ ಸೇರಿದಾಗ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.
ಶಿವರಾಜಕುಮಾರ್ ಅಭಿನಯದ ‘ಮೃತ್ಯುಂಜಯ’, ‘ಆನಂದ ಜ್ಯೋತಿ’ ಹಾಗೂ ಮಂಜುಳ ಅವರು ನಟಿಸಿದ್ದ ‘ರುದ್ರಿ’ ಮುಂತಾದ ಚಿತ್ರಗಳನ್ನು ಚಿ.ದತ್ತರಾಜ್ ನಿರ್ದೇಶನ ಮಾಡಿದ್ದರು.