ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ನೌಕರಿ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಿಂಗ್ ಪಿನ್ ತಿಪ್ಪೇಸ್ವಾಮಿಯನ್ನು ಅರೆಸ್ಟ್ ಮಾಡಲಾಗಿದೆ.
ಹೊಸದುರ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ವ್ಯಕ್ತಿ ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಗದಗ ನಗರದಲ್ಲಿ ಸರ್ಕಾರಿ ನೌಕರಿ ಆಸೆಗೆ ಬಿದ್ದು 3 ಕೋಟಿ 30 ಲಕ್ಷ ರೂಪಾಯಿ ಪಂಗನಾಮ ಹಾಕಿಸಿಕೊಂಡ ಜನರು ಗೋಳಾಡುತ್ತಿದ್ದಾರೆ.
ಈ ಖದೀಮರು ಬಡವರನ್ನು ವಂಚಿಸಿ ಅವರ ಹಣದಲ್ಲಿ ಐಶಾರಾಮಿ ಕಾರುಗಳನ್ನು ಖರೀದಿ ಮಾಡಿ ಮಸ್ತ್ ಮಜಾ ಮಾಡ್ತಾಯಿದ್ದರು. ಸದ್ಯ ಈ ಗ್ಯಾಂಗ್ ಅನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಸುಮಾರು 39 ವಿದ್ಯಾವಂತ ಯುವಕರಿಗೆ ಕೋರ್ಟ್ ಹಾಗೂ ಸರ್ಕಾರಿ ಕಚೇರಿಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡಿ ಈ ಖತರ್ನಾಕ್ ಗ್ಯಾಂಗ್ ಮೋಸ ಮಾಡಿದೆ.
ರಾಜ್ಯದ ನಾನಾ ಕೋರ್ಟ್ ಗಳಲ್ಲಿ, ಸಿಪಾಯಿ ಹಾಗೂ ಪ್ರೋಸೆಸ್ ಸರ್ವರ್ ಹುದ್ದೆ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡಿದ್ದಾರೆ. ಮೊದಲು ಸರ್ಕಾರಿ ನೌಕರಿ ಇಲ್ಲ ಅಂತ ಮದುವೆಯಾಗದೇ ಯುವಕರು ಒದ್ದಾಡುತ್ತಿದ್ರು. ನಂತರ ನೌಕರಿ ಸಿಗುತ್ತಲ್ಲ ಅಂತ ನಂಬಿ ಜನರು ಜಮೀನು, ಮನೆ ಮಾರಿ ಲಕ್ಷ ಲಕ್ಷ ಹಣ ನೀಡಿದ್ದಾರೆ. ಆದರೆ, ಈ ಖತರ್ನಾಕ್ ಗ್ಯಾಂಗ್ ಕೋಟ್ಯಾಂತರ ಹಣ ಸಂಗ್ರಹ ಮಾಡಿ ಮೋಸಮಾಡಿದೆ.