ಮೇಷ
ಉದ್ಯೋಗ ಕ್ಷೇತ್ರದಲ್ಲಿ ಕೆಲವು ಬೆಳವಣಿಗೆ ನಿಮಗೆ ಅಸಂತೃಪ್ತಿ ತರಲಿದೆ. ಅಸಹಕಾರ ಎದುರಿಸುವಿರಿ. ಮಾನಸಿಕ ಕ್ಷೆಭೆ ಹೆಚ್ಚುವುದು.
ವೃಷಭ
ನಿಮ್ಮ ಕಠಿಣ ದುಡಿಮೆಗೆ ಸೂಕ್ತ ಫಲ ದೊರಕಲಿದೆ. ವಿರೋಧಿಗಳ ಮನ ಒಲಿಸಲು ಪ್ರಯತ್ನಿಸಿ. ಸಂಘರ್ಷವು ನಿಮಗೆ ಒಳಿತು ತಾರದು. ಆರ್ಥಿಕ ಒತ್ತಡ ಹೆಚ್ಚು.
ಮಿಥುನ
ಹೆಚ್ಚು ಭಾವುಕರಾಗಿ ವರ್ತಿಸುವಿರಿ. ನೆಗೆಟಿವ್ ಚಿಂತನೆಗಳು ಮನವನ್ನು ಆವರಿಸಲಿದೆ. ಆತ್ಮವಿಶ್ವಾಸ ಕಳಕೊಳ್ಳದಿರಿ. ಗುರಿ ಸಾಧನೆಗೆ ಇತರರ ಸಹಕಾರ ಪಡೆಯಿರಿ.
ಕಟಕ
ನಿಮ್ಮ ಯೋಜನೆ ಸಕಾಲದಲ್ಲಿ ಪೂರ್ಣಗೊಳ್ಳಲಿದೆ. ಆ ಮೂಲಕ ನಿಮಗೆ ಮಾನಸಿಕ ನಿರಾಳತೆ. ಕೌಟುಂಬಿಕ ಸಮಸ್ಯೆಗೆ ಪರಿಹಾರ ಸಿಗಲಿದೆ.
ಸಿಂಹ
ಸವಾಲು ಎದುರಿಸುವಿರಿ. ಆದರೆ ಅದನ್ನು ಪರಿಹರಿಸುವ ವಿಶ್ವಾಸವೂ ನಿಮಗಿದೆ. ಸೂಕ್ತ ಸಹಕಾರ ಕೂಡ ಲಭ್ಯ. ದಿನದಂತ್ಯಕ್ಕೆ ಎಲ್ಲವನ್ನು ಸಾಧಿಸಿದ ತೃಪ್ತಿ.
ಕನ್ಯಾ
ಉದ್ಯಮ ವ್ಯವಹಾರದಲ್ಲಿ ಎಚ್ಚರ ವಹಿಸಿ. ನಿಮ್ಮ ನಿರ್ಲಕ್ಷ್ಯವು ನಷ್ಟಕ್ಕೆ ಕಾರಣವಾದೀತು. ಕೌಟುಂಬಿಕ ಹಿತಾಸಕ್ತಿ ಕಾಯಲು ಆದ್ಯತೆ ಕೊಡಿರಿ.
ತುಲಾ
ದಂಪತಿ ಮಧ್ಯೆ ವಿರಸ ಉಂಟಾದೀತು. ಅದನ್ನು ನಾಜೂಕಿನಿಂದ ನಿಭಾಯಿಸಬೇಕು. ಹಣಕಾಸು ಕೊರತೆ ಎದುರಿಸುವಿರಿ. ಸಾಲ ಪಡೆಯಲು ಹೋಗದಿರಿ.
ವೃಶ್ಚಿಕ
ನಿಮ್ಮ ಪ್ರಾಮಾಣಿಕ ದುಡಿಮೆಗೆ ಬಡ್ತಿಯ ಅವಕಾಶ ಸಿಗಲಿದೆ. ಮನೆಯಲ್ಲಿ ಸಂಬಂಧ ಸುಧಾರಣೆಗೆ ಆದ್ಯತೆ ಕೊಡಿ. ಭಿನ್ನಮತ ನಿವಾರಿಸಿಕೊಳ್ಳಿ.
ಧನು
ಕೆಲಸಮಯದ ಕೋಲಾಹಲದ ಬಳಿಕ ನಿಮ್ಮ ಬದುಕು ಸರಿಸ್ಥಿತಿಗೆ ಬರಲಿದೆ. ಭಾವನಾತ್ಮಕ ಸ್ಥಿರತೆ ಸಾಧಿಸುವಿರಿ. ಸಂಬಂಧ ಸುಧಾರಣೆಗೆ ಗಮನ ಕೊಡಿರಿ.
ಮಕರ
ನಿಮ್ಮ ಹಿಂದಿನ ಪರಿಶ್ರಮದ ಫಲ ಈಗ ಸಿಗುವುದು. ಚಿಂತೆ ಪರಿಹಾರ ಕಾಣುವುದು. ಖರ್ಚು ನಿಯಂತ್ರಿಸಿ. ಆ ಮೂಲಕ ಆರ್ಥಿಕ ಬಿಕ್ಕಟ್ಟು ನಿವಾರಿಸಿ.
ಕುಂಭ
ಯಾವುದೇ ಪ್ರಮುಖ ನಿರ್ಧಾರ ತಾಳುವ ಮುನ್ನ ಅದರ ಸಾಧಕಬಾಧಕ ಆಲೋಚಿಸಿ. ಆಪ್ತರ ಜತೆ ಸಮಾಲೋಚನೆ ನಡೆಸಿ. ವಿವೇಕ ಮುಖ್ಯ.
ಮೀನ
ಹಳೆಯ ಸಮಸ್ಯೆ ಮತ್ತೆ ಕಾಡಬಹುದು. ಪರಿಹಾರ ಕಾಣದೆ ತೊಳಲಾಟ. ನಿಮ್ಮ ದೇಹಾರೋಗ್ಯದ ಕುರಿತು ಹೆಚ್ಚಿನ ಗಮನ ಕೊಡಬೇಕು.