ಮೇಷ
ಸಂಗಾತಿ ಉತ್ತಮ ಹೊಂದಾಣಿಕೆ. ಅದರಿಂದ ಮನೆಯಲ್ಲಿನ ಪರಿಸರ ಹೆಚ್ಚು ಸೌಹಾರ್ದದಾಯಕ. ಆರ್ಥಿಕ ಪರಿಸ್ಥಿತಿ ಸುಧಾರಣೆ.
ವೃಷಭ
ನಿಮ್ಮ ಕಾರ್ಯದಲ್ಲಿ ಏರುಪೇರು ಅನುಭವಿಸುವಿರಿ. ಆದರೆ ಅಂತಿಮವಾಗಿ ಎಲ್ಲವೂ ಸುಸೂತ್ರವಾಗುವುದು. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿಹೆಚ್ಚಲಿದೆ.
ಮಿಥುನ
ನಿಮಗಿಂದು ನಿರಾಳ ದಿನ. ಮನರಂಜನಾತ್ಮಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಅವಕಾಶ. ಬಂಧುಗಳಿಂದ ನಿಮಗೆ ಹಿತವೆನಿಸುವ ಸುದ್ದಿ ಕೇಳಿಬಂದೀತು.
ಕಟಕ
ನಿಮ್ಮ ಗುಣಾತ್ಮಕ ಮನೋಭಾವವು ಸಮಸ್ಯೆ ಪರಿಹಾರಕ್ಕೆ ನೆರವಾಗುವುದು. ಆಪ್ತರಿಂದ ಸೂಕ್ತ ನೆರವು , ಬೆಂಬಲ ಪಡೆಯುವಿರಿ.
ಸಿಂಹ
ಹತ್ತಿರದ ಬಂಧುಗಳ ಭೇಟಿ ಸಂಭವ. ಖಾಸಗಿ ಬದುಕಿನಲ್ಲಿ ನಿಮಗೆ ಪೂರಕವಾದ ಬೆಳವಣಿಗೆ ಸಂಭವಿಸುವುದು. ಆರ್ಥಿಕ ಒತ್ತಡ ನಿವಾರಣೆ, ಧನಲಾಭ.
ಕನ್ಯಾ
ನಿಮ್ಮ ಕಾರ್ಯವು ಇತರರನ್ನು ಪ್ರೇರೇಪಿಸುವುದು. ಕೌಟುಂಬಿಕ ಸಮಸ್ಯೆ ಪರಿಹಾರ. ಕಠಿಣ ಕಾರ್ಯ ಸುಗಮವಾಗಿ ಮುಗಿಯುವುದು.
ತುಲಾ
ಮಹತ್ವದ ವಿಚಾರಗಳಲ್ಲಿ ತುರ್ತು ನಿರ್ಧಾರ ತಾಳಬೇಕಾದೀತು. ನಿಮ್ಮ ನಿರ್ಧಾರ ಯುಕ್ತ ಫಲವನ್ನೆ ನೀಡುವುದು. ಹಣದ ಕೊರತೆ ನಿವಾರಣೆ.
ವೃಶ್ಚಿಕ
ನಿಮ್ಮ ಕಾರ್ಯವನ್ನು ಎಚ್ಚರಿಕೆಯಿಂದ ನೆರವೇರಿಸಿ. ನಿಮ್ಮಲ್ಲಿ ತಪ್ಪು ಕಂಡುಹಿಡಿಯಲು ಕೆಲವರು ಕಾದಿರುತ್ತಾರೆ. ಅದಕ್ಕೆ ಅವರಿಗೆ ಅವಕಾಶ ನೀಡದಿರಿ.
ಧನು
ಇಂದು ಒತ್ತಡಪೂರ್ಣ ದಿನ. ಕೆಲವಾರು ಕಾರ್ಯ ಒಮ್ಮೆಗೇ ಮುಗಿಸಬೇಕಾದ ಒತ್ತಡ. ದೈಹಿಕ ಅನಾರೋಗ್ಯ, ಮೈ ನೋವು ಬಾಧಿಸಬಹುದು.
ಮಕರ
ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿ ಇಂದು ಪ್ರಮುಖ ನಿರ್ಧಾರ ತಾಳದಿರಿ. ಅದು ನಿಮಗೆ ಪೂರಕ ಆಗಲಾರದು. ಸಣ್ಣ ವಿಷಯಕ್ಕೆ ಮನಸ್ತಾಪ ಒಳಿತಲ್ಲ.
ಕುಂಭ
ನಿಮ್ಮ ಗುರಿ ಈಡೇರುವ ತನಕ ನಿಮ್ಮ ಪ್ರಯತ್ನ ನಿಲ್ಲಿಸದಿರಿ. ಹಿನ್ನಡೆಗಳಿಗೆ ಅಂಜದಿರಿ. ದಿನದಂತ್ಯಕ್ಕೆ ನಿಮಗೆ ಉತ್ತಮ ಪ್ರತಿಫಲ ಸಿಕ್ಕೇಸಿಗುವುದು.
ಮೀನ
ಆತ್ಮೀಯರ ಜತೆ ಸಂಬಂಧ ಹಳಸಿದ್ದರೆ ಅದನ್ನು ಸರಿಪಡಿಸಲು ನೀವೇ ಮೊದಲು ಹೆಜ್ಜೆ ಇಡಿ. ಅದರಿಂದ ಎಲ್ಲವೂ ಒಳಿತಾಗುವುದು.