ಈ ಬಾರಿ ಬಿಗ್‌ಬಾಸ್‌ನಲ್ಲಿ ಬರೀ ಬೀಪ್‌ ಬೀಪ್‌ ಸೌಂಡ್‌: ನೋಡೋದಕ್ಕೆ ಅಸಹ್ಯ ಅಂತಿದ್ದಾರೆ ಫ್ಯಾನ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಳೆದೆಲ್ಲ ಸೀಸನ್‌ಗಳಿಗಿಂತ ಈ ಬಾರಿಯ ಬಿಗ್‌ಬಾಸ್‌ ಸೀಸನ್‌ನಲ್ಲಿ ಅವಾಚ್ಯ ಪದಗಳ ಬಳಕೆ ಹೆಚ್ಚಾಗಿದೆ. ಕಂಟೆಸ್ಟೆಂಟ್‌ಗಳು ಕೆಟ್ಟ ಕೊಳಕು ಮಾತುಗಳನ್ನಾಡುತ್ತಿದ್ದು, ಬೀಪ್‌ ಹಾಕಲೇಬೇಕಾದ ಪರಿಸ್ಥಿತಿ ಬಂದಿದೆ.

ಬಿಗ್ ಬಾಸ್​’ನಲ್ಲಿ ಜಗದೀಶ್ ಹಾಗೂ ಉಳಿದ ಸ್ಪರ್ಧಿಗಳ ಮಧ್ಯೆ ಕಿರಿಕ್ ಆಗಿದೆ. ಇದಕ್ಕೆ ಕಾರಣ ಆಗಿದ್ದು ಜಗದೀಶ್ ಅವರು. ಹಂಸಾ ವಿರುದ್ಧ ಅವರು ಬಳಕೆ ಮಾಡಿದ ಶಬ್ದ ಎಲ್ಲರ ಕೋಪಕ್ಕೆ ಕಾರಣ ಆಗಿದೆ. ಇದು ಇಡೀ ಮನೆ ಹೊತ್ತು ಉರಿಯಲು ಕಾರಣವಾಯಿತು. ಜಗದೀಶ್ ಅವರು ಬಳಸಿದ ಅವಾಚ್ಯ ಶಬ್ದದಿಂದ ಎಲ್ಲರೂ ಅವರ ವಿರುದ್ಧ ಸಿಡಿದೆದ್ದರು.

‘ನನ್ನ ಗಂಡನ ಸಾಯಿಸೋಕೆ ಅವರು ಯಾರು? ಇದಕ್ಕೆ ನೀವೇ ಏನಾದರೂ ಮಾಡ್ತೀರಾ ಅಥವಾ ನಾವೇ ಪರಿಹಾರ ಕಂಡುಕೊಳ್ಳಬೇಕಾ’ ಎಂದು ಹಂಸಾ ಅವರು ಬಿಗ್ ಬಾಸ್ ಕ್ಯಾಮರಾ ಎದುರು ಬಂದು ಅವಾಜ್ ಹಾಕಿದರು.

ಆ ಬಳಿಕ ಬಿಗ್ ಬಾಸ್​ ಎಲ್ಲರ ಬಳಿ ಸೋಫಾ ಮೇಲೆ ಕೂರುವಂತೆ ಹೇಳಿದರು. ಆದರೆ, ಮನೆಯ ವಾತಾವರಣ ಹದಗೆಡುತ್ತಲೇ ಹೋಯಿತು. ಬಿಗ್ ಬಾಸ್ ಆದೇಶದ ಮಧ್ಯೆಯೂ ಜಗದೀಶ್ ಅವರು ಅವಾಚ್ಯ ಶಬ್ದ ಬಳಕೆ ಮಾಡಿದರು.

ರಂಜಿತ್ ಅವರಿಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದರು ಜಗದೀಶ್. ರಂಜಿತ್ ಕೂಡ ಕೋಪದಿಂದ ಕೂಗಾಡಿದರು. ಇಡೀ ಎಪಿಸೋಡ್ ತುಂಬಾ ಬೈಗುಳಗಳೇ ಇದ್ದಿದ್ದರಿಂದ ಬಿಗ್ ಬಾಸ್​ಗೆ ಬೀಪ್ ಹಾಕಿ ಹಾಕಿ ಸಾಕಾಯಿತು. ವೀಕ್ಷಕರಿಗೆ ಇದು ಅಸಹ್ಯ ಹುಟ್ಟಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!