ಬಿಲ್ಲವ ಯುವತಿಯರು , ಭಜನೆ ಬಗ್ಗೆ ಅವಹೇಳನ: ಅರಣ್ಯಾಧಿಕಾರಿ ವಿರುದ್ಧ ಬೀದಿಗಿಳಿದ ಹಿಂದು ಸಂಘಟನೆಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್‌:

ಬಿಲ್ಲವ ಯುವತಿ ಮತ್ತು ಭಜನೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ವಿರುದ್ಧ ಹಿಂದೂ ಪರ ಸಂಘಟನೆಗಳಿಂದ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದಲ್ಲಿ ತೀವ್ರ ಪ್ರತಿಭಟನೆ ನಡೆಯಿತು.

ಪುತ್ತೂರು ಡಿವೈಎಸ್ಪಿ ಕಛೇರಿಯ ಮುಂಭಾಗದಲ್ಲಿ ಭಜನೆ ಮಾಡುವುದರ ಮೂಲಕ ಪ್ರತಿಭಟನೆ ನಡೆಸಿದ ಹಿಂದೂ ಪರ ಸಂಘಟನೆಗಳು ಸಂಜೀವ ಪೂಜಾರಿಯನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿತು.

ಅರಣ್ಯ ಇಲಾಖೆ ಉಪ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಎಂಬಾತ ಹಿಂದೂ ಕಾರ್ಯಕರ್ತನೋರ್ವನೊಂದಿಗೆ ಮಾತನಾಡಿದ ಅಡಿಯೋದಲ್ಲಿ ಬಿಲ್ಲವ ಯುವತಿಯರಿಗೆ ಅವಹೇಳನ ಮಾಡಿ ಭಜನೆಯಲ್ಲಿ ಪಾಲ್ಗೊಂಡ ಒಂದು ಲಕ್ಷ ಬಿಲ್ಲವ ಯುವತಿಯರು ವ್ಯಭಿಚಾರಿಗಳಾಗಿದ್ದಾರೆ ಎನ್ನುವ ಹೇಳಿಕೆ ನೀಡಿದ್ದ.

ಈ ಹಿನ್ನಲೆಯಲ್ಲಿ ಹಿಂದೂಪರ ಸಂಘಟನೆಗಳು ನಗರದ ಡಿವೈಎಸ್ಪಿ ಕಛೇರಿ ಎದುರುಗಡೆ ಭಜನೆ ಮಾಡಿ ಧರಣಿ ಪ್ರತಿಭಟನೆ ನಡೆಸಿದರು. ಸಂಜೀವ ಪೂಜಾರಿಯನ್ನು ಬಂಧಿಸುವವರೆಗೂ ಡಿವೈಎಸ್ಪಿ ಕಛೇರಿ ಮುಂದೆಯೇ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದರು.

ಸಂಜೀವ ಪೂಜಾರಿ ವಿರುದ್ಧ ಈಗಾಗಲೇ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಲು ಪ್ರಯತ್ನಿಸಿದರು.
ಆದರೆ, ಎಫ್ಐಆರ್ ನಲ್ಲಿ ಕ್ಷುಲ್ಲಕ ಸೆಕ್ಷನ್ ಹಾಕಿದ್ದಾರೆಂದು ಹಿಂದೂ ಸಂಘಟನೆಗಳು ಆರೋಪಿಸಿತಲ್ಲದೇ
ಆತನಿ ವಿರುದ್ಧ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!