ಮೇಷ.
ಈ ದಿನ ನಿಮ್ಮ ಗುರಿ ಈಡೇರಿಸಲು ಸದುಪಯೋಗಿಸಿ. ಗ್ರಹಗತಿ ನಿಮಗೆ ಪೂರಕವಾಗಿದೆ. ಧನಲಾಭವಿದೆ. ಖಾಸಗಿ ಸಮಸ್ಯೆ ನಿವಾರಣೆ.
ವೃಷಭ
ನಿಮ್ಮ ಕೆಲಸದಿಂದ ಉತ್ತಮ ಪ್ರತಿಫಲ ಪಡೆಯುವಿರಿ. ಕುಟುಂಬ ಸದಸ್ಯರ ಜತೆ ಮುಕ್ತ ಮಾತುಕತೆಯಿಂದ ಬಿಕ್ಕಟ್ಟು ಪರಿಹಾರವಾಗಲಿದೆ. ಮಿಥುನ
ಎಲ್ಲ ಸರಿಯಾಗಿದೆ ಎಂದುಕೊಂಡರೂ ಏನೋ ಕೊರತೆಯ ಭಾವ. ಯೋಜಿಸಿ ಕಾರ್ಯ ಎಸಗಿ. ಧನಹಾನಿಯ ಸಾಧ್ಯತೆ, ಎಚ್ಚರವಿರಿ.
ಕಟಕ
ಮನೆಯಲ್ಲಿ ಭಿನ್ನಾಭಿಪ್ರಾಯ ಸಂಭವ. ಉಳಿದ ಕಾರ್ಯದಲ್ಲಿ ನಿರಾಸಕ್ತಿ. ಹೆಚ್ಚುವರಿ ಖರ್ಚು. ಮನೋಸ್ಥಿತಿ ಸಮಸ್ಥಿತಿಗೆ ತಂದುಕೊಳ್ಳಿ.
ಸಿಂಹ
ವ್ಯವಸ್ಥಿತವಾಗಿ ಕಾರ್ಯ ಎಸಗಿ. ನಡುವಲ್ಲಿ ಗೊಂದಲಕ್ಕೆ ಸಿಲುಕದಿರಿ. ಅತಿರೇಕದ ಚಿಂತನೆ ನಡೆಸಿ ನೆಮ್ಮದಿ ಕಳಕೊಳ್ಳಬೇಡಿ. ಶಾಂತರಾಗಿ ವರ್ತಿಸಿ.
ಕನ್ಯಾ
ವಿವೇಕದಿಂದ ವರ್ತಿಸಿ. ಸಣ್ಣ ವಿಷಯ ದೊಡ್ಡದಾಗಿಸಬೇಡಿ. ಹೆಚ್ಚುವರಿ ಹೊಣೆ ಬಿದ್ದೀತು. ಸಹನೆಯಿಂದ ನಿಭಾಯಿಸಿ. ಬಂಧು ಜತೆ ವೈರವಾದೀತು.
ತುಲಾ
ಎಂದಿಗಿಂತ ವಿಭಿನ್ನ ದಿನ. ಒತ್ತಡದಿಂದ ಮುಕ್ತಿ. ನಿಮ್ಮ ಮೆಚ್ಚಿನ ಹವ್ಯಾಸದಲ್ಲಿ ಖುಷಿ ಕಾಣುವಿರಿ. ಆರೋಗ್ಯ ಸಮಸ್ಯೆ ಪರಿಹಾರ.
ವೃಶ್ಚಿಕ
ಸಹನೆಯಿಂದ ಕಾರ್ಯ ನಿರ್ವಹಿಸಿ. ಅದರ -ಲಿತಾಂಶಕ್ಕೆ ಆತುರ ಪಡಬೇಡಿ. ಹಣದ ವ್ಯವಹಾರ ನೆಮ್ಮದಿ ಕೆಡಿಸಬಹುದು.
ಧನು
ಈ ದಿನ ನಿಮ್ಮ ಬದುಕಲ್ಲಿ ಮಹತ್ವದ ಬದಲಾವಣೆ ಆದೀತು. ಅದೃಷ್ಟ ನಂಬಿ ಕೂರದಿರಿ. ಪ್ರಯತ್ನ ಮುಖ್ಯ. ಆದರೂ ಹಿನ್ನಡೆ ಉಂಟಾದೀತು. ಮಕರ
ಅಧಿಕ ಒತ್ತಡ, ಕಾರ್ಯದಲ್ಲಿ ತಪ್ಪು, ನಿರ್ಧಾರದಲ್ಲಿ ಪ್ರಮಾದ ಸಂಭವ. ಭಾವುಕ ಸನ್ನಿವೇಶಕ್ಕೆ ಎರವಾಗುವಿರಿ. ವಾಗ್ವಾದ ತಪ್ಪಿಸಿರಿ.
ಕುಂಭ
ಫಲಪ್ರದ ದಿನ. ಕಡಿಮೆ ಶ್ರಮದಿಂದ ಹೆಚ್ಚಿನದ್ದನ್ನು ಸಾಽಸುವಿರಿ. ಉದ್ದೇಶಿಸಿದ ಕಾರ್ಯ ತೃಪ್ತಿ ನೀಡಲಿದೆ. ಬಂಧು ಸಹಕಾರದಿಂದ ನೆಮ್ಮದಿ. ಮೀನ
ಕೆಲಸದ ಕ್ಷೇತ್ರ ಹಿತ ತರಲಿದೆ. ಅಸಹಿಷ್ಣುತೆ ನಿವಾರಣೆ. ಪ್ರೀತಿಯ ಅಹವಾಲಿಗೆ ಪೂರಕ ಸ್ಪಂದನೆ. ಈ ಕುರಿತಾದ ಆತಂಕ ಅನಗತ್ಯ.
ದಿನಭವಿಷ್ಯ: ನಿಮ್ಮ ಕೆಲಸದಿಂದ ಉತ್ತಮ ಪ್ರತಿಫಲ ಪಡೆಯುವಿರಿ, ಫ್ಯಾಮಿಲಿ ಜೊತೆಗೂ ಬೆಸ್ಟ್ ಟೈಮ್
ಭವಿಷ್ಯ



