ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಗಾಜಾ ಪಟ್ಟಿಯಲ್ಲಿರುವ ಬೀಟ್ ಲಾಹಿಯಾ ಪಟ್ಟಣದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 73 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 73 ಪ್ಯಾಲೆಸ್ತೇನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಮಾಧ್ಯಮ ವರದಿ ಮಾಡಿದೆ.
ಬಹುಮಹಡಿ ಕಟ್ಟಡವನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಗಿದ್ದು ಸಮೀಪದ ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇಸ್ರೇಲ್ ಪ್ರಧಾನಿ ನೆತನ್ಯಾಹು ಮನೆಯ ಮೇಲೆ ಡ್ರೋನ್ ಅಟ್ಯಾಕ್ ನಡೆದಿದೆ. ಇದ್ರಿಂದ ಸಿಡಿದೆದ್ದ ನೆತನ್ಯಾಹು, ನಮ್ಮನ್ನ ತಡೆಯೋಕೆ ಯಾರಿಂದ್ಲೂ ಸಾಧ್ಯವಿಲ್ಲ ಅಂತಾ ಸಮರ ಸಂದೇಶ ರವಾನಿಸಿದ್ದಾರೆ.