ಹೊಸದಿಗಂತ ಡಿಜಟಲ್ ಡೆಸ್ಕ್:
ಮುಡಾ ಹಗರಣಕ್ಕೆ ಸಂಬಂಧಿಸಿ ತನ್ನ ಸತತ 17ತಾಸುಗಳ ವಿಚಾರಣೆಯನ್ನು ಇಡಿ ಅಂತ್ಯಗೊಳಿಸಿದ್ದು, ಬಹಳಷ್ಟು ಅಗತ್ಯ ದಾಖಲೆ, ಅಂಶಗಳನ್ನು ವಿಚಾರಣೆ ವೇಳೆ ತಂಡ ಸಂಗ್ರಹಿಸಿದೆ.
ಮೈಸೂರಿನಲ್ಲಿ ಮೊಕ್ಕಾಂ ಹೂಡಿರುವ ಇಡಿ ಅಧಿಕಾರಿಗಳ ತಂಡ ನಿನ್ನೆ ಬೆಳಗ್ಗೆ 10 ಗಂಟೆಯಿಂದ ಮಧ್ಯರಾತ್ರಿ 2:40 ಗಂಟೆ ವರೆಗೆ ವಿಚಾರಣೆ ನಡೆಸಿದೆ. ಈ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ವಾಪಸ್ ನೀಡಿದ 14 ನಿವೇಶನ ಹಾಗೂ ಮುಡಾದಲ್ಲಿ 50:50 ಅನುಪಾತದಡಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಮಗ್ರ ದಾಖಲೆ ಸಂಗ್ರಹಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಇಡಿ ಒಟ್ಟು 19 ತಾಸಿನ ವಿಚಾರಣೆ ನಡೆಸಿದ್ದು, ಮೊದಲ ದಿನ 12 ತಾಸು ವಿಚಾರಣೆ ನಡೆಸಿತ್ತು. ವಿಚಾರಣೆಗೆ ಸಂಬಂಧಿಸಿಸ ಸಾವಿರಾರು ಪುಟಗಳ ದಾಖಲೆಯನ್ನು ಎರಡು ಕೆಂಪು ಬಣ್ಣದ ಬಾಕ್ಸ್‌ಗಳಲ್ಲಿ ಅಧಿಕಾರಿಗಳು ಕೊಂಡೊಯ್ಯಲಾಗಿದೆ.