ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಸಿಎಂ ಡಿಕೆ ಶಿವಕುಮಾರ್ ಶೀಘ್ರದಲ್ಲೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಕರಿವೃಷಭ ರಾಜದೇಶಿಕೇಂದ್ರ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೀಶ್ವರದಲ್ಲಿ ನಡೆದ ಮುಕ್ತಿ ಮಂದಿರ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಶಿವಕುಮಾರ್ ಆದಷ್ಟು ಬೇಗ ಮುಖ್ಯಮಂತ್ರಿಯಾಗುತ್ತಾರೆ. ಅವರನ್ನು ಸಿಎಂ ಮಾಡಿ ಮುಕ್ತಿಮಂದಿರದ ಆ ಜಾಗಕ್ಕೆ ಕರೆದುಕೊಂಡು ಹೋಗಿ ನಾಡಿಗೆ ತ್ರಿಕೋಟಿ ಲಿಂಗಸ್ಥಾಪನೆ ಮಾಡಿ ತೋರಿಸಬೇಕು ಎಂದರು.
ಲಿಂಗ ಸ್ಥಾಪನೆಗೆ ಸುಮಾರು 15 ಕೋಟಿ ರೂಪಾಯಿಯಾದರೂ ಬೇಕು. ರಾಜಕೀಯ ಮುತ್ಸದ್ಧಿ ಶ್ರೀಮಠದ ಮಗನಾದ ಗಂಗಾಧರ ಶಿವಾಚಾರ್ಯರ ಆಶಿರ್ವಾದ ಪಡೆದ ಡಿಸಿಎಂ ಡಿ.ಕೆ.ಶಿವಕುಮಾರ್ ಗಮನಕ್ಕೆ ತ್ರಿಕೋಟಿ ಲಿಂಗ ಸ್ಥಾಪನೆ ಬಗ್ಗೆ ಹೇಳಲಾಗಿದೆ. ವೀರಗಂಗಾಧರ ಜಗದ್ಗುರುಗಳ ಮೇಲೆ ಡಿ.ಕೆ.ಶಿವಕುಮಾರ್ ಅಪಾರ ನಂಬಿಕೆ ಹೊಂದಿದ್ದಾರೆ. ಜಗದ್ಗುರುಗಳ ಸಂಕಲ್ಪ ಪೂರ್ಣಗೊಳಿಸೋಣ. ಡಿಸಿಎಂ ಅವರನ್ನು ಸಿಎಂ ಮಾಡಿ ತ್ರಿಕೋಟಿ ಲಿಂಗ ಸ್ಥಾಪನೆ ಮಾಡಿದರು ಎಂದು ನಾಡಿಗೆ ತಿಳಿಸೋಣ ಎಂದು ಹೇಳಿದ್ದಾರೆ.