ಯಲ್ಲಾಪುರದಲ್ಲಿ ಅಡಿಕೆ ಕಳ್ಳನನ್ನು ಬಂಧಿಸಿದ ಪೊಲೀಸರು

ಹೊಸದಿಗಂತ ವರದಿ, ಯಲ್ಲಾಪುರ :

ಅಡಿಕೆ ಸಮೇತ ಅಡಿಕೆ ಕಳ್ಳನನ್ನು ಯಲ್ಲಾಪುರದ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಕಾಳಮ್ಮನಗರದ ಮಂಜುನಾಥ್ ಮಹೇಶ್ ಸಿದ್ದಿ (20) ಬಂದಿತ ಆರೋಪಿ. ಆರೋಪಿಯಿಂದ 7 ಗೊಬ್ಬರದ ಚೀಲದ್ದ 1 ಕ್ವಿಂಟಲ್ 92 ಕೆಜಿ ಅಡಿಕೆ ವಶಕ್ಕೆ ಪಡೆದಿರುವ ಪೊಲೀಸರು. ಆರೋಪಿಯು ಗೋಪಾಲ್ ನಾಗೇಶ್ ಭಗವತ್ ಇವರ ಮನೆಯ ಹಿಂದಿನ ಗೋಡೆ ಒಡೆದು ಸುಮಾರು 3.6 ಲಕ್ಷ ರೂ ಬೆಲೆಯ ಸುಮಾರು 20 ಕ್ವಿಂಟಲ್ ಒಣ ಅಡಿಕೆ ಕಳ್ಳತನ ಮಾಡಿದ್ದನು. ಸಿ ಪಿ ಐ ರಮೇಶ್ ಹನಾಪುರ ನೇತ್ರತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಶೇಡಜಿ ಚೌಹಾಣ್, ಸಿದ್ದಪ್ಪ ಗುಡಿ, ಮಹಾವೀರ್ ಕಾಂಬಳೆ ಹಾಗೂ ನಸ್ರೀನ್ ತಾಜ್ ಸಿಬ್ಬಂದಿಗಳಾದ ಬಸವರಾಜ್ ಹಗರಿ, ಉಮೇಶ್ ತುಂಬರಗಿ,ಗಿರೀಶ್ ಲಮಾಣಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!