ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ ಹುಡುಗಿಯೊಬ್ಬಳು ಭಾರತೀಯ ಸಂಸ್ಕೃತಿಗೆ ಮನಸೋತಿದ್ದು, ಹೀಗಾಗಿ ಈಗ ತನಗಾಗಿ ಭಾರತೀಯ ಹುಡುಗನನ್ನು ಹುಡುಕುತ್ತಿದ್ದಾಳೆ.
ರಷ್ಯಾ ಮೂಲದ ಬೆಡಗಿ ಮದುವೆಯಾಗಲು ತಯಾರಿ ಮಾಡುತ್ತಿದ್ದಾರೆ. ಭಾರತೀಯ ವರನ ಮಾತ್ರ ಮದುವೆಯಾಗಲು ಬಯಸಿದ್ದಾರೆ. ಇದರ ಜೊತೆ ನಾಲ್ಕು ಕಂಡೀಷನ್ ಕೂಡ ಹಾಕಿದ್ದಾರೆ. ಮ್ಯೂಸಿಕ್ ಇಷ್ಟಪಡಬೇಕು, ಪ್ರಯಾಣದಲ್ಲಿ ಆಸಕ್ತಿ ಇರಬೇಕು ಸೇರಿದಂತೆ ಕೆಲ ಕಂಡೀಷನ್.
ರಷ್ಯಾ ಬೆಡಗಿ ಹೆಸರು ನೈಲ್. ಸದ್ಯ ದುಬೈನಲ್ಲಿ ನೆಲೆಸಿದ್ದಾಳೆ. ಭಾರತೀಯ ಸಂಸ್ಕೃತಿ, ಪದ್ಧತಿಗಳಿಗೆ ಮಾರು ಹೋಗಿರುವ ನೈಲ್ ಇದೀಗ ಭಾರತೀಯ ಹುಡುಗನನ್ನೇ ಮದುವೆಯಾಗಲು ಬಯಸಿದ್ದಾಳೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. ಅಕ್ಟೋಬರ್ 18ಕ್ಕೆ ಈಕೆ ಭಾರತೀಯ ವರನ ಮದುವೆಯಾಗಲು ಬಯಸಿರುವ ವಿಡಿಯೋ ಹಂಚಿಕೊಂಡಿದ್ದಾಳೆ.
ತಾನು ಮದುವೆಯಾಗುವ ಹುಡುಗನಲ್ಲಿ ಯಾವೆಲ್ಲಾ ಕ್ವಾಲಿಟಿ ಇರಬೇಕು ಅನ್ನೋದನ್ನು ಈ ವಿಡಿಯೋದಲ್ಲಿ ಹೇಳಿದ್ದಾಳೆ. ನನ್ನ ಮದುವೆಯಾಗುವ ಹುಡುಗನಿಗೆ ಮ್ಯೂಸಿಕ್ ಕೇಳುವ ಹವ್ಯಾಸ ಆಸಕ್ತಿ ಇರಬೇಕು. ಡ್ಯಾನ್ಸ್ ಇಷ್ಟಪಡಬೇಕು, ಸಂದರ್ಭಕ್ಕೆ ತಕ್ಕಂತೆ ಡ್ಯಾನ್ಸ್ ಮಾಡುವಂತಿರಬೇಕು. ಪ್ರಯಾಣ ಇಷ್ಟಪಡಬೇಕು, ಈ ಮೂಲಕ ಜೊತೆಯಾಗಿ ಟ್ರಿಪ್ ಮಾಡಲು ಆಸಕ್ತಿ ಇರಬೇಕು. ರಷ್ಯಾ ಮೇಲೆ ಪ್ರೀತಿ ಇರಲಿ, ನನ್ನನ್ನೂ ಪ್ರೀತಿಸಬೇಕು ಎಂದು ಕಂಡೀಷನ್ ಹಾಕಿದ್ದಾಳೆ. ಇದರ ಜೊತೆಗೆ ಇನ್ನೆರಡು ಕ್ವಾಲಿಟಿ ಇರಬೇಕು ಎಂದಿದ್ದಾಳೆ. ಒಂದು ಮದುವೆಯಾಗುವ ಹುಡುಗ 6 ಅಡಿ ಎತ್ತರ ಇರಬೇಕು, ಹಸಿರು ಕಣ್ಣು ಹೊಂದಿರಬೇಕು ಎಂದಿದ್ದಾಳೆ.
6 ಫೀಟ್ ಎತ್ತರ, ಹಸಿರು ಕಣ್ಣು ಈ ಎರಡು ಕ್ವಾಲಿಟಿ ಇದ್ದ ಹುಡುಗರು ಇನ್ನುಳಿದ ಕಂಡೀಷನ್ ಆಸಕ್ತಿ ಬೆಳೆಸಿಕೊಂಡರೂ ಮದುವೆಯಾಗುವ ಅವಕಾಶ ಪಡೆಯುತ್ತಾರೆ.
ಈಕೆಯ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ರಷ್ಯಾ ಯುವತಿಯ ಕಂಡೀಷನ್ ಹಾಗೂ ಸಂಪೂರ್ಣ ಕ್ವಾಲಿಟಿ ಇರುವ ಹುಡುಗ ಭಾರತದಲ್ಲಿ ಇಲ್ಲ, ಸ್ವಲ್ಪ ಮ್ಯಾಚ್ ಆಗುವ ಹುಡುಗ ಹೃತಿಕ್ ರೋಶನ್ ಮಾತ್ರ ಎಂದಿದ್ದಾರೆ. ಮತ್ತೆ ಕೆಲವರು ನಾನು 6 ಫೀಟ್ ಎತ್ತರವಿದ್ದೇನೆ, ಗ್ರೀನ್ ಲೆನ್ಸ್ ಹಾಕಿದರೆ ಸಮ್ಮತಿಯೇ ಎಂದು ಪ್ರಶ್ನಿಸಿದ್ದಾರೆ.