January20, 2026
Tuesday, January 20, 2026
spot_img

ಟಾಟಾ ಮುಂಬೈ ಮ್ಯಾರಥಾನ್ 2026: ಕರ್ನಾಟಕದಿಂದ ದಾಖಲೆಮಟ್ಟದ ಸ್ಪರ್ಧಿಗಳ ಪಾಲ್ಗೊಳ್ಳುವಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಏಷ್ಯಾದ ಅತಿದೊಡ್ಡ ಮ್ಯಾರಥಾನ್ ಆಗಿರುವ ಟಾಟಾ ಮುಂಬೈ ಮ್ಯಾರಥಾನ್ 2026ರಲ್ಲಿ ಕರ್ನಾಟಕವು ಪ್ರಮುಖ ಕೊಡುಗೆ ನೀಡಿದ ರಾಜ್ಯವಾಗಿ ಹೊರಹೊಮ್ಮಿದೆ.

ಕರ್ನಾಟಕದಿಂದ ಒಟ್ಟು 3,151 ಓಟಗಾರರು ಈ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು, ಮಹಾರಾಷ್ಟ್ರದ ನಂತರ ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನವನ್ನು ರಾಜ್ಯ ಪಡೆದುಕೊಂಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪ್ರಮುಖ ನಗರಗಳಿಂದ 69,702 ಮಂದಿ ಟಾಟಾ ಮುಂಬೈ ಮ್ಯಾರಥಾನ್ 2026ರಲ್ಲಿ ಪಾಲ್ಗೊಂಡಿದ್ದರು. ಈ ಭಾರಿ ಸಂಖ್ಯೆಯ ಭಾಗವಹಿಸುವಿಕೆ, ಆರೋಗ್ಯ, ಫಿಟ್‌ನೆಸ್, ಸಮುದಾಯ ಓಟ ಹಾಗೂ ಸಂಘಟಿತ ಕ್ರೀಡಾಕೂಟಗಳ ಮೇಲಿನ ಆಸಕ್ತಿ ಮತ್ತು ಬದ್ಧತೆ ದಿನೇದಿನೇ ಹೆಚ್ಚುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ.

ಗುಜರಾತ್, ದೆಹಲಿ, ತಮಿಳುನಾಡು ಮತ್ತು ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯಗಳನ್ನು ಹಿಂದಿಕ್ಕಿ, ಕರ್ನಾಟಕವು ದೇಶದ ಪ್ರಮುಖ ಓಟದ ಕೇಂದ್ರಗಳ ಪೈಕಿ ತನ್ನದೇ ಆದ ಸ್ಥಾನವನ್ನು ಗಟ್ಟಿಯಾಗಿ ಸ್ಥಾಪಿಸಿದೆ. ಪ್ರಥಮ ಬಾರಿ ಓಟದಲ್ಲಿ ಭಾಗವಹಿಸಿದವರಿಂದ ಹಿಡಿದು ಅನುಭವಸಂಪನ್ನ ಮ್ಯಾರಥಾನರ್‌ಗಳು ಹಾಗೂ ವಿವಿಧ ಸಾಮಾಜಿಕ ಉದ್ದೇಶಗಳಿಗೆ ಬೆಂಬಲ ನೀಡಿದ ಚಾರಿಟಿ ಓಟಗಾರರ ವರೆಗೆ, ರಾಜ್ಯದ ಭಾರಿ ಪ್ರತಿನಿಧಿತ್ವವು ಈ ಮಹಾ ಕ್ರೀಡಾಕೂಟಕ್ಕೆ ಹೆಚ್ಚುವರಿ ಉತ್ಸಾಹವನ್ನು ತುಂಬಿತು.

ದೇಶದ ಪ್ರತಿಯೊಂದು ಮೂಲೆಯಿಂದ ಭಾಗವಹಿಸುವವರನ್ನು ಆಕರ್ಷಿಸುವ ಟಾಟಾ ಮುಂಬೈ ಮ್ಯಾರಥಾನ್ 2026ರ ಆವೃತ್ತಿಯಲ್ಲಿ ಕರ್ನಾಟಕದ ಬಲಿಷ್ಠ ಪಾಲ್ಗೊಳ್ಳುವಿಕೆ, ಭಾರತದಲ್ಲಿನ ಪ್ರಮುಖ ಓಟದ ರಾಜ್ಯಗಳ ಪೈಕಿ ಒಂದಾಗಿ ತನ್ನ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸಿದ್ದು, ದೇಶದ ಮ್ಯಾರಥಾನ್ ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದೆ.

Must Read