ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಗಗನ್ಗೀರ್ನಲ್ಲಿನ ಆಪ್ಕೋ ಇನ್ಫ್ರಾಟೆಕ್ನ ನಿರ್ಮಾಣ ಹಂತದಲ್ಲಿರುವ ಕಾರ್ಮಿಕರ ಶಿಬಿರದಲ್ಲಿ ಭಾನುವಾರ ಸಂಜೆ ನಡೆದ ಪ್ರಮುಖ ದಾಳಿಯಲ್ಲಿ ಉಗ್ರರಿಂದ ಏಳು ಮಂದಿ ಕಾರ್ಮಿಕರು ಹತ್ಯೆಗೀಡಾಗಿದ್ದರು. ಇದರಿಂದಾಗಿ ಈ ಭಾಗದ ಕಾರ್ಮಿಕರಿಗೆ ನಡುಕ ಹುಟ್ಟಿದೆ.
ಪೊಲೀಸ್ ತನಿಖೆ ನಡೆಯುತ್ತಿದ್ದು, ರಕ್ತದ ಕಲೆಗಳು ಮತ್ತು ಖಾಲಿ ಕಾರ್ಟ್ರಿಜ್ಗಳು ಶಿಬಿರದ ಆವರಣದಲ್ಲಿ ಇನ್ನೂ ಬಿದ್ದಿವೆ ಎಂದು ಅಪ್ಕೊ ಇನ್ಫ್ರಾಟೆಕ್ನಲ್ಲಿ ಉದ್ಯೋಗಿಯಾಗಿರುವ ವಲಸೆ ಕಾರ್ಮಿಕರೊಬ್ಬರು ಹೇಳುತ್ತಾರೆ.
APCO ಇನ್ಫ್ರಾಟೆಕ್ ಕಂಪನಿಯು ಕಾರ್ಯತಂತ್ರದ 6.5 ಕಿಮೀ Z-ಮಾರ್ಫ್ ಸುರಂಗವನ್ನು ನಿರ್ಮಿಸುತ್ತಿದ್ದು, ಅದು ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಡುವೆ ಎಲ್ಲಾ ಹವಾಮಾನಗಳಲ್ಲಿ ಸಂಪರ್ಕವನ್ನು ಒದಗಿಸುತ್ತದೆ. ಕಳೆದ ಭಾನುವಾರ ರಾತ್ರಿ 7.15ರ ಸುಮಾರಿಗೆ ಶಿಬಿರದ ಒಳಗಿರುವ ಕೊಠಡಿಯೊಂದರಲ್ಲಿ ತನ್ನ ಮೂವರು ಸ್ನೇಹಿತರು ಇದ್ದಾಗ ಗುಂಡಿನ ಸದ್ದು ಕೇಳಿಸಿತು ಎಂದು ಕಾರ್ಮಿಕರು ಹೇಳಿಕೊಂಡಿದ್ದಾರೆ.
ನಾವು ಹೊರಹೋಗಲು ಪ್ರಯತ್ನಿಸಿದಾಗ, ಉಗ್ರಗಾಮಿಗಳು ಶಿಬಿರ ತಾಣ ಮೇಲೆ ದಾಳಿ ನಡೆಸಿದ್ದರಿಂದ ಇತರ ಕಾರ್ಮಿಕರು ನಮಗೆ ಅಡಗಿಕೊಳ್ಳಲು ಹೇಳಿದರು. ಉಗ್ರರ ಗುಂಡಿನ ದಾಳಿಯು ಸುಮಾರು 15 ನಿಮಿಷಗಳ ಕಾಲ ನಡೆಯಿತು. ಭದ್ರತಾ ತಂಡವು ನಮ್ಮನ್ನು ರಕ್ಷಿಸಲು ಸುಮಾರು ಎರಡು ಗಂಟೆ ನಂತರ ಸ್ಥಳಕ್ಕೆ ತಲುಪಿದರು ಎಂದು ಕಾರ್ಮಿಕರು ಮಾಹಿತಿ ನೀಡಿದ್ದಾರೆ.