ಬಾಬುಸಾಪಾಳ್ಯ ದುರಂತದ ಬೆನ್ನಲ್ಲೇ ಮತ್ತೊಂದು ಆತಂಕ: ಬೆಂಗಳೂರಲ್ಲಿ ವಾಲಿ ನಿಂತಿದೆ ಮತ್ತೊಂದು ಕಟ್ಟಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದ ಬಾಬುಸಾಪಾಳ್ಯದಲ್ಲಿ ಕಟ್ಟಡ ಕುಸಿದು ದುರಂತವೇ ಸಂಭವಿಸಿತ್ತು. ಇದುವರೆಗೂ 8 ಜನ ಕಾರ್ಮಿಕರು ಸಾವನ್ನಪ್ಪಿದ್ದರೆ, 8 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಮಧ್ಯೆ ಸಿಲಿಕಾನ್​ ಸಿಟಿಯಲ್ಲಿ 6 ಅಂತಸ್ತಿನ ನಿರ್ಮಾಣ ಹಂತದ ಮತ್ತೊಂದು ಕಟ್ಟಡ ವಾಲಿದ್ದು, ಆತಂಕ ಶುರುವಾಗಿದೆ.

ನಗರದ ಹೊರಮಾವು ಪ್ರದೇಶದ ನಂಜಪ್ಪ ಗಾರ್ಡನ್​ನಲ್ಲಿರುವ ಪುಟ್ಟಪ್ಪ ಮಾಲೀಕತ್ವದ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡ ಬಲಭಾಗಕ್ಕೆ ವಾಲಿದೆ. 12*30 ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಸದ್ಯ ವಾಲಿರುವುದರಿಂದ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಆತಂಕ ಶುರುವಾಗಿದೆ.

ಗ್ರೌಂಡ್​ ಫ್ಲೋರ್ ಸೇರಿದಂತೆ ನಾಲು ಅಂತಸ್ತಿನ ಕಟ್ಟಡಕ್ಕೆ ಮಾಲೀಕ ಪುಟ್ಟಪ್ಪ ಅನುಮತಿ ಪಡೆದಿದ್ದ. ಆದರೆ ನಿಯಮ‌ ಮೀರಿ ಆರಂತಸ್ತಿನ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ನೋಟಿಸ್​ಗೆ ಉತ್ತರ ನೀಡಿರುವ ಮಾಲೀಕ ಕಟ್ಟಡ ಸ್ವಂತ ಖರ್ಚಿನಲ್ಲಿ ತೆರವು ಮಾಡೋದಾಗಿ ಪತ್ರ ಬರೆದಿದ್ದಾರೆ. ಸದ್ಯ ವಾಲಿದ ಕಟ್ಟಡ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!