ಹೆಜ್ಜೇನು ದಾಳಿಗೆ ಬೆಚ್ಚಿಬಿದ್ದ ಸ್ಥಳೀಯರು, 7 ಜನರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೆಜ್ಜೇನು ಒಂದೇ ದಿನದಲ್ಲಿ ಎರಡು ಬಾರಿ ದಾಳಿ ಮಾಡಿದ್ದು, ಏಳು ಜನರು ಗಾಯಗೊಂಡು ಒಬ್ಬರ ಸ್ಥಿತಿ ಗಂಭೀರವಾಗಿದೆ.

ಹೊಸನಗರ ಚಿಕ್ಕಪೇಟೆಯಲ್ಲಿ ಘಟನೆ ನಡೆದಿದೆ. ಚಿಕ್ಕಪೇಟೆನಗರದಲ್ಲಿರುವ ಭಾಷಾ ಅವರ ಮನೆ ಮೇಲೆ ಹೆಜ್ಜೇನು ದಾಳಿ ನಡೆಸಿದೆ.

ಭಾಷಾ, ಪತ್ನಿ ಅಸ್ಮಾ, ಮಕ್ಕಳಾದ ಆರೀಫ್, ಅನೀಫ್, ಭಾಷಾ ಪಕ್ಕದ ಮನೆ ನಿವಾಸಿ ಯಾಸೀನ್, ಹಾಸಿಗೆ ರಿಪೇರಿಗಾಗಿ ತೆರಳಿದ್ದ ಹುಸೇನ್ ಸಾಬ್, ಬಾಬಾ ಸಾಬ್ ಮೇಲೆ ದಾಳಿ ನಡೆಸಿದೆ. ಸಂತ್ರಸ್ತರನ್ನು ನಗರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹುಸೇನ್ ಸಾಬ್ (68) ತೀವ್ರ ಅಸ್ವಸ್ಥರಾಗಿದ್ದು, ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ದಾಖಲಾಗಿದ್ದಾರೆ.

ಅದೇ ದಿನ ಹೆಜ್ಜೇನು ಮತ್ತೆ ಭಾಷಾ ಮಗ ಆರಿಫ್ ಮೇಲೆ ಹಲ್ಲೆ ಮಾಡಿದೆ. ಹೆಜ್ಜೇನು ಒಂದೇ ದಿನ ಎರಡು ಬಾರಿ ದಾಳಿ ನಡೆಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!