ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಸಂಕಷ್ಟದ ಮೇಲೆ ಸಂಕಷ್ಟ ಶುರುವಾದಂತೆ ಕಾಣುತ್ತಿದೆ.
ಮೈಸೂರು ಕೈಗಾರಿಕಾ ಪ್ರದೇಶದಲ್ಲಿ ನವೆಂಬರ್ 2023 ರಲ್ಲಿ 1.84 ಕೋಟಿ ರೂ. ಹಣ ನೀಡಿ ಸ್ವಾಧೀನಪಡಿಸಿಕೊಂಡಿರುವ 20 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಹಣದ ಮೂಲವನ್ನು ಕಂಡುಹಿಡಿಯಲು ಆರ್‌ಟಿಐ ಕಾರ್ಯಕರ್ತ ಗಂಗರಾಜ್ ಇಡಿಯನ್ನು ಸಂಪರ್ಕಿಸಲಿದ್ದಾರೆ. ನಂತರ ಅವರು ದೂರು ಕೂಡ ನೀಡಲಿದ್ದಾರೆ.
ಇಷ್ಟು ಹಣ ಒಬ್ಬ ಗೃಹಿಣಿಗೆ ಎಲ್ಲಿಂದ ಬಂತು ಎಂಬ ಪ್ರಶ್ನೆ ಬರುತ್ತದೆ. ಹೀಗಾಗಿ, ಈ ಪ್ರಕರಣದ ಕುರಿತು ನಾನು ಇ.ಡಿ ಅಧಿಕಾರಿಗಳ ಜೊತೆ ಚರ್ಚೆ ಮಾಡ್ತೀನಿ ಎಂದು ತಿಳಿಸಿದ್ದಾರೆ.