ಸಕ್ಕರೆ ಇಲ್ಲದೆ ಏನಿದೆ ಹೇಳಿ? ದಿನಕ್ಕೆ ಒಂದು ಬಿಸ್ಕೆಟ್ ಅಥವಾ ಐಸ್‌ಕ್ರೀಂ ಅಂದುಕೊಳ್ಳಿ. ಅದೆಲ್ಲ ತಿನ್ನೋದಿಲ್ಲ ಅಂದ್ರೂ ಕಾಫಿ, ಟೀಗಾದ್ರೂ ಸಕ್ಕರೆ ಬಳಕೆ ಮಾಡೇ ಮಾಡ್ತೀರಿ. ಬಟ್ ಅತಿಯಾಗಿ ಸಕ್ಕರೆಯನ್ನು ಇಷ್ಟಪಡೋರು ಇದ್ದಾರೆ. ದೇಹಕ್ಕೆ ಸಕ್ಕರೆ ಜಾಸ್ತಿ ಆಗಿದೆ ಅಂದ್ರೆ ಈ ಸಿಗ್ನಲ್‌ಗಳನ್ನು ನೀಡತ್ತೆ. ಯಾವುದು ನೋಡಿ..
1 ಅತಿಯಾದ ಹಸಿವು, ಈಗ ತಿಂಡಿ ತಿಂದಿದ್ರೂ ಅರ್ಧ ಗಂಟೆ ಬಿಟ್ಟು ಮತ್ತೆ ತಿನ್ನೋಣ ಎನಿಸುತ್ತದೆ
2 ಸಕ್ಕರೆ ಅತಿಯಾಗಿ ತಿನ್ನೋರಿಗೆ ಯಾವಾಗಲೂ ಆಯಾಸ, ಸುಸ್ತು ಎನಿಸುತ್ತದೆ
3 ಹೊಟ್ಟೆಯ ಸುತ್ತ ಎಕ್ಸ್ಟಾ ಕೊಬ್ಬಿನ ಟೈಯರ್ ಕಾಣಿಸ್ತಿದ್ಯಾ? ತೂಕ ಹೆಚ್ಚಳ, ಹೊಟ್ಟೆ ದಪ್ಪ ಆಗೋದು ಸಕ್ಕರೆಯಿಂದಲೇ
4 ಮುಖದಲ್ಲಿ ಇದ್ದಕ್ಕಿದ್ದಂತೆಯೇ ಮೊಡವೆಗಳು ಏಳುತ್ತಿದ್ರೆ ಸಕ್ಕರೆ ತಿನ್ನೋದು ಕಡಿಮೆ ಮಾಡಿ
5 ಸದಾ ಬಾಯಿಯಿಂದ ದುರ್ವಾಸನೆ, ಹಲ್ಲಿನ ಹುಳುಕು ಸಕ್ಕರೆ ಸಂಕೇತ
6 ಹೈಬಿಪಿ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಬಂದರೆ ಅದು ಸಕ್ಕರೆ ಹೆಚ್ಚಳದ ರಿಸಲ್ಟ್
7 ಮೂಡ್ ಸ್ವಿಂಗ್ಸ್ ಆಗುವುದು, ಇದ್ದಕ್ಕಿದ್ದಂತೆಯೇ ಮೂಡಿ, ಕೆಲವೊಮ್ಮೆ ಖುಷಿ, ಆಮೇಲೆ ಅಳು ಇವೆಲ್ಲಾ ಮಾಡ್ತಿರೋದು ಸಕ್ಕರೆನೇ
8 ಸಕ್ಕರೆ ತಿಂದಷ್ಟು ಆಸೆಯಾಗುತ್ತದೆ. ಸಿಹಿ ಪದಾರ್ಥ ತಿನ್ನೋಣ ಎಂದು ಕ್ರೇವಿಂಗ್ ಆಗುತ್ತದೆ
9 ಕಾಲಿನಲ್ಲಿ ಕಾಯಿಂಟ್ ಪೇನ್ ಆಗುತ್ತದೆ
10 ನಿದ್ದೆ ಬರೋದಿಲ್ಲ, ಬಂದರೂ ಪದೇ ಪದೆ ಎಚ್ಚರ ಆಗುತ್ತದೆ