ವರುಣನ ಆರ್ಭಟಕ್ಕೆ ಸಿಟಿ ಮುಳುಗಿದ್ರು.. ‘ನಮ್ಮ ಮೆಟ್ರೋ’ ಗೆ ಮಾತ್ರ ‘ಕೋಟಿ’ ಭಾಗ್ಯ ಸಿಕ್ಕಿದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯಲ್ಲಿ ಸುರಿದ ಭಾರೀ ಮಳೆ ನಮ್ಮ ಮೆಟ್ರೋದ ಆದಾಯವನ್ನು ಹೆಚ್ಚಿಸಿದೆ.

ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿತ್ತು. ಆದ್ದರಿಂದ, ಹೆಚ್ಚಿನ ಜನರು ನಮ್ಮ ಮೆಟ್ರೋವನ್ನು ಸಾರಿಗೆ ಸಾಧನವಾಗಿ ಬಳಸಿದರು. ಇದು ನಮ್ಮ ಮೆಟ್ರೋ ಆದಾಯದಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೆಟ್ರೊ ಆದಾಯದಲ್ಲಿ ಭಾರಿ ಬೆಳವಣಿಗೆ ಕಂಡುಬಂದಿದೆ. ಅಕ್ಟೋಬರ್ 2023 ರಲ್ಲಿ 24 ದಿನಗಳಲ್ಲಿ 39.12 ಕೋಟಿಗಳನ್ನು ಸಂಗ್ರಹಿಸಲಾಗಿತ್ತು. ಈ ವರ್ಷ 48.35 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 9.22 ಕೋಟಿ ರೂ. ಹೆಚ್ಚುವರಿ ಆದಾಯ ನಮ್ಮ ಮೆಟ್ರೋಗೆ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!