ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಮಗೆ ಪುನೀತ್ ರಾಜ್‌ಕುಮಾರ್ ಯಾಕಷ್ಟು ಇಷ್ಟ?
ಸಿನಿಮಾದಲ್ಲಿ ಪುನೀತ್ ಮೀರಿಸೋಕಾಗೋದಿಲ್ಲ, ಅದು ಬಿಟ್ಟು ಪುನೀತ್ ಕಲಿಸಿದ ಜೀವನ ಪಾಠ, ಅಭಿಮಾನಿಗಳನ್ನು ನೋಡಿಕೊಂಡ ರೀತಿ, ಕರೆದಲ್ಲೆಲ್ಲ ಸ್ಟಾರ್ ಅನ್ನೋ ಧಿಮಾಕು ತೋರದೇ ಹೋಗುವ ಸರಳತೆ ಜನರಿಗೆ ಅಚ್ಚುಮೆಚ್ಚು. ಹೊಸಬರಿಗೆ ಪ್ರೋತ್ಸಾಹಿಸಿ, ಎಷ್ಟೋ ಸಿನಿಮಾ, ಜಾಹೀರಾತಿನಲ್ಲಿ ಫ್ರೀಯಾಗಿ ನಟಿಸಿದ್ದು ಪುನೀತ್.
ಪರಮಾತ್ಮ ಕಣ್ಮರೆಯಾಗಿ ಇಂದಿಗೆ ಮೂರು ವರ್ಷ. ಇದೇ ದಿನದಂದು ಜನ ಪುನೀತ್‌ರನ್ನು ಕಡೆಯ ಬಾರಿ ನೋಡಲು ಮುಗಿಬಿದ್ದಿದ್ದರು. ಪುನೀತ್ ಹೋದ ನಂತರ ಎಷ್ಟೋ ದಿನಗಳು ದುಃಖದಲ್ಲಿ ಕಳೆದಿದ್ದರು. ಇಂದು ಪುನೀತ್ ಪುಣ್ಯಸ್ಮರಣೆಯಂದು ಅಭಿಮಾನಿಗಳು ಪುಣ್ಯದ ಕೆಲಸ ಮಾಡಲು ಹೊರಟಿದ್ದಾರೆ. ಆಹಾರ ವಿತರಣೆ, ರಕ್ತದಾನ ಕ್ಯಾಂಪ್, ನೇತ್ರದಾನ ಇನ್ನಿತರ ಕೆಲಸಗಳನ್ನು ಮಾಡುತ್ತಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಪುನೀತ್ ರಾಜ್‌ಕುಮಾರ್ ರಾರಾಜಿಸುತ್ತಿದ್ದಾರೆ. ಎಲ್ಲರೂ ತಮ್ಮ ನೆಚ್ಚಿನ ಹೀರೋ ಫೋಟೊವನ್ನು ಸ್ಟೇಟಸ್ ಹಾಕಿಕೊಂಡು ನಿಮ್ಮನ್ನು ಎಂದೂ ಮರೆಯೋದಿಲ್ಲ ಎಂದು ಹೇಳುತ್ತಿದ್ದಾರೆ.