ಎರಡನೇ ಪತ್ನಿ ಜೊತೆ ಬೆಂಗಳೂರಿನಲ್ಲಿ ಸೆಟಲ್‌ ಆಗಿದ್ದ ಬಾಂಗ್ಲಾ ಪ್ರಜೆ ಅರೆಸ್ಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತನ್ನ ಎರಡನೇ ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲಸಿದ್ದ ಬಾಂಗ್ಲಾದೇಶ  ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ.

ರಹಮಾನ್​ ಶೈಕ್​​ (38) ಬಂಧಿತ ಬಾಂಗ್ಲಾದೇಶ ಪ್ರಜೆ. ರಹಮಾನ್​ ಶೈಕ್ ಕಳೆದ ಎಂಟು ವರ್ಷಗಳಿಂದ ಬೆಂಗಳೂರಿನ ಚನ್ನಸಂದ್ರದಲ್ಲಿ ನೆಲಸಿದ್ದು, ಕಸ ವಿಂಗಡಣೆ ಘಟಕದಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

ಆರೋಪಿ ರಹಮಾನ್​ ಶೈಕ್​ ತನ್ನ ಜನ್ಮ ಪ್ರಮಾಣ ಪತ್ರ ನಕಲಿ ಮಾಡಿದ್ದಾನೆ. ನಕಲಿ ಪ್ರಮಾಣ ಪತ್ರದಲ್ಲಿ ಪಶ್ಚಿಮ ಬಂಗಾಳದಲ್ಲಿ ಜನಸಿದ್ದೇನೆ ಎಂದು ಬರೆದುಕೊಂಡಿದ್ದಾನೆ. ರಹಮಾನ್​ ಶೈಕ್ ನಕಲಿ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿಯನ್ನು ಸಹ ಹೊಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿರುವ ರಹಮಾನ್​ ಶೈಕ್ ಮೊದಲ ಪತ್ನಿ, ಪತಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು. ತನ್ನ ಪತಿ ರಹಮಾನ್​ ಶೈಕ್ ವೈದ್ಯಕೀಯ ವೀಸಾದ ಮೇಲೆ ಭಾರತಕ್ಕೆ ತೆರಳಿದ್ದು, ಹಿಂದಿರುಗಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಈ ವಿಚಾರ ತಿಳಿದು, ಬಾಂಗ್ಲಾದೇಶ ಪೊಲೀಸರು ಭಾರತದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಂತರ ರಹಮಾನ್‌ ತನ್ನ ಎರಡನೇ ಪತ್ನಿಯ ಜೊತೆ ಬೆಂಗಳೂರಿನಲ್ಲಿ ಸೆಟಲ್‌ ಆಗಿರುವುದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!