ರೈತರು ಅನ್ನದಾತರು, ನಾವು ಅನ್ನದಾತರ ಆಸ್ತಿ ಮುಟ್ಟೋದಕ್ಕೆ ಸಾಧ್ಯನಾ?: ಜಮೀರ್ ಖಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಜರಾಯಿ ವಕ್ಫ್ ಎರಡೂ ಒಂದೇ. ನಾವು ಅಲ್ಲಾ ಅಂತೀವಿ, ನೀವು ದೇವರು ಅಂತೀರಿ. ಅಲ್ಲಾ ನಮ್ಮ ಆಶಾಕಿರಣ, ಜೋಶಿ ಏನಾದರೂ ಹೇಳಲಿ. ನಾನು ಮೊದಲ ಹಿಂದೂಸ್ತಾನಿ. ಆಮೇಲೆ ಮುಸ್ಲಿಂ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಆಸ್ತಿಗೆ ನಾವು ನೋಟಿಸ್ ಕೊಟ್ಟಿದ್ದೇವೆ. ಬೇರೆಯವರ ಆಸ್ತಿ ಕಬಳಿಸಲು ನಾವು ಯಾರು? ರೈತರು ಅನ್ನದಾತರು, ಅವರ ಆಸ್ತಿಯನ್ನು ಮುಟ್ಟೋದಕ್ಕೆ ಸಾಧ್ಯನಾ? ವಕ್ಫ್ ಭೂಮಿ 1.12 ಲಕ್ಷ ಎಕರೆ ಇದೆ. ನಮ್ಮ ಬಳಿ ದಾಖಲೆ ಇದೆ ಎಂದು ಹೇಳಿದ್ದಾರೆ.

ಬಿಜೆಪಿಯವರು ಇಂತಹ ರಾಜಕಾರಣ ಮಾಡಬಾರದು. ರಾಜಕೀಯಕ್ಕೆ ಬಂದು ಜಾತಿ ಕಟ್ಟಿದರೆ ನಿಷ್ಪ್ರಯೋಜಕ. ನಾವು ಜಾತಿ ನೋಡಿದ್ರೆ ನಾಶವಾಗುತ್ತೇವೆ. ಮುಜರಾಯಿ ಇಲಾಖೆಯ ಆಸ್ತಿಯೂ ಕಬಳಿಕೆಯಾಗುತ್ತಿದೆ. ಅದನ್ನು ಉಳಿಸೋಣ, ಹಿಂದೂ ಸಹೋದರರು ನನಗೆ ಮತ ಹಾಕಿದ್ದಾರೆ. ನನಗೆ ಎಲ್ಲಾ ಸಮಾಜವೂ ಒಂದೇ. ರಾಜಕಾರಣಿಗಳು ಇಡೀ ಸಮಾಜವನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವವರು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!