ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಾತರಿ ಯೋಜನೆಗಳಿಂದ ಆರ್ಥಿಕ ಒತ್ತಡಕ್ಕೆ ಒಳಗಾಗಿರುವ ಸರ್ಕಾರ ಈಗ ಖಾತರಿ ಯೋಜನೆಗಳ ಪರಿಷ್ಕರಣೆಗೆ ಹೇಳಿದೆ. ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಪರಿಷ್ಕರಣೆ ಕುರಿತು ಸ್ವತಃ ಡಿಸಿಎಂ ಡಿಕೆಶಿವಕುಮಾರ್ ಸುಳಿವು ಕೊಟ್ಟಿದ್ದಾರೆ.
ವಿಧಾನಸೌಧದ ಭವ್ಯ ಮೆಟ್ಟಿಲಲ್ಲಿ ಐರಾವತ ಕ್ಲಾಸ್ 2.0 ಕ್ಲಬ್ ಬಸ್ ಉದ್ಘಾಟನೆ ಸಮಾರಂಭದಲ್ಲಿ ಡಿಸಿಎಂ ಶಕ್ತಿ ಯೋಜನೆ ಪರಿಷ್ಕರಣೆ ಕುರಿತು ಮಾತನಾಡಿ, ಟಿಕೆಟ್ ವ್ಯವಸ್ಥೆಯನ್ನು ಮರು ಪರಿಚಯಿಸುವ ಸುಳಿವು ನೀಡಿದ್ದಾರೆ.
ಬಹಳಷ್ಟು ಜನರು ನನಗೆ ಇಮೇಲ್ ಮಾಡಿದ್ದಾರೆ, ಮೆಸೇಜ್ ಮಾಡಿದ್ದಾರೆ ಮತ್ತು ನಾವು ಟಿಕೆಟ್ಗಾಗಿ ಪಾವತಿಸಲು ಸಿದ್ಧರಿದ್ದೇವೆ. ನಮಗೆ ಫ್ರೀ ಪ್ರಯಾಣ ಬೇಡ ಎಂದು ತಿಳಿಸಿದ್ದಾರೆ.
ಅನೇಕರು ನಾವು ಟಿಕೆಟ್ ಹಣ ಕೊಡುವುದಕ್ಕೆ ಸಿದ್ಧ ಎಂದು ಪ್ರಾಮಾಣಿಕವಾಗಿ ಅಭಿಪ್ರಾಯ ಹೇಳುತ್ತಿದ್ದಾರೆ. ಹೀಗಾಗಿ ನಾವು, ರಾಮಲಿಂಗಾರೆಡ್ಡಿ ಎಲ್ಲಾ ಕೂತು ಈ ಬಗ್ಗೆ ಚರ್ಚೆ ಮಾಡಿ, ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.