ಕಥೆಗಳ ಪ್ರಕಾರ, ರಾಕ್ಷಸ ನರಕಾಸುರನು ತನ್ನ ಶಕ್ತಿಗಳಿಂದ ದೇವರುಗಳು ಮತ್ತು ಋಷಿಗಳಿಗೆ ಬಹಳ ಕಷ್ಟ ಕೊಡುತ್ತಿದ್ದ. ಇದಲ್ಲದೇ, 16 ಸಾವಿರದ ನೂರು ಸುಂದರ ರಾಜಕುಮಾರಿಯರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ. ನರಕಾಸುರನ ಕಾಟದಿಂದ ಎಲ್ಲರೂ ಬೇಸತ್ತು ಹೋಗಿದ್ದರು. ಹಾಗಾಗಿ ಕೃಷ್ಣನ ಬಳಿ ಆಶ್ರಯ ಕೇಳಿಕೊಂಡು ಬರುತ್ತಾರೆ. ನರಕಾಸುರನಿಗೆ ಮಹಿಳೆಯ ಕೈಯಲ್ಲಿ ಮಾತ್ರ ಸಾಯುವ ಹಾಗೆ ವರವಿತ್ತು. ಹಾಗಾಗಿ ಏನಾದರೂ ಮಾಡಲೇಬೇಕಿತ್ತು. ಆಗ ಕೃಷ್ಣನು ತನ್ನ ಪತ್ನಿ ಸತ್ಯಭಾಮೆಯ ಸಹಾಯದಿಂದ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ನರಕಾಸುರನನ್ನು ಕೊಂದು 16 ಸಾವಿರದ ನೂರು ಹುಡುಗಿಯರನ್ನು ಅವನ ಸೆರೆಯಿಂದ ಮುಕ್ತಗೊಳಿಸಿದನು ಎನ್ನಲಾಗುತ್ತದೆ.
ಈ ವರ್ಷ ನರಕ ಚತುರ್ದಶಿ ಅಕ್ಟೋಬರ್ 30 ರಂದು ಮಧ್ಯಾಹ್ನ 1:15 ಕ್ಕೆ ಪ್ರಾರಂಭವಾಗುತ್ತದೆ. ಇದು ಮರುದಿನ ಅಕ್ಟೋಬರ್ 31 ರಂದು ಮಧ್ಯಾಹ್ನ 03:52 ಕ್ಕೆ ಕೊನೆಗೊಳ್ಳುತ್ತದೆ. ನರಕಾಸುರನ ನಾಶದಿಂದಾಗ ಸಂಭ್ರಮಿಸಿದ ಭೂಮಿಯ ಮೇಲಿದ್ದ ಜನರು ಅಂದು ಹಬ್ಬದ ಸಂಭ್ರಮ ಆಚರಿಸಿದರು. ಅಂದಿನಿಂದ ಈ ಹಬ್ಬವನ್ನು ಆಚರಿಸುವ ಸಂಪ್ರದಾಯವು ಪ್ರಾರಂಭವಾಯಿತು ಎನ್ನುವ ನಂಬಿಕೆ ಇದೆ.
ನರಕ ಚತುರ್ದಶಿಯ ದಿನದಂದು ಕಾಳಿಕಾ ಮಾತೆಯ ಆರಾಧನೆಗೆ ವಿಶೇಷ ಮಹತ್ವವಿದೆ. ನರಕ ಚತುರ್ದಶಿಯ ದಿನದಂದು ಎಣ್ಣೆ ಸ್ನಾನ ಮೂಲಕ ಗ್ರಹಗಳ ಶಾಂತಿಗಾಗಿ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.