ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಆಟಗಾರರ ಪಟ್ಟಿ ರಿಲೀಸ್ ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ನಾಯಕ ರಿಷಭ್ ಪಂತ್ ಸೇರಿ ಹಲವು ಸ್ಟಾರ್ ಆಟಗಾರರನ್ನೇ ಹೊರಗಿಟ್ಟು, ಆಲ್‌ರೌಂಡರ್ ಹಾಗೂ ಬೌಲರ್‌ಗಳಿಗೆ ಮಣೆಹಾಕಿದೆ.
ನಿರೀಕ್ಷೆಯಂತೆ ರಿಷಬ್ ಪಂತ್ ಅವರನ್ನು ಉಳಿಕೆ ಪಟ್ಟಿಯಿಂದ ಕೈಬಿಟ್ಟಿದ್ದು, ಓರ್ವ ವಿದೇಶಿ ಆಟಗಾರ ಸೇರಿದಂತೆ ನಾಲ್ವರನ್ನು ಧಾರಣೆ ಮಾಡಿಕೊಂಡಿದೆ. ಅಕ್ಟರ್ ಪಟೇಲ್ ಅತಿ ಹೆಚ್ಚು ಸಂಭಾವನೆ ಗಳಿಸಿದ್ದಾರೆ.
ಯಾರಿಗೆ ಎಷ್ಟು ಮೊತ್ತ?
* ಅಕ್ಷರ್ ಪಟೇಲ್ – 16.5 ಕೋಟಿ ರೂ.
* ಕುಲ್ದೀಪ್ ಯಾದವ್ – 13.25 ಕೋಟಿ ರೂ.
* ಟ್ರಿಸ್ಟನ್ ಸ್ಟಬ್ಸ್ – 10 ಕೋಟಿ ರೂ.
* ಅಭಿಷೇಕ್ ಪೊರೆಲ್ – 4 ಕೋಟಿ ರೂ.
ಹರಾಜು ಪ್ರಕ್ರಿಯೆ ಶುರುವಾದ ಆರಂಭದಿಂದಲೂ ರಿಷಭ್ ಪಂತ್ ಡೆಲ್ಲಿ ತಂಡವನ್ನು ತೊರೆಯುತ್ತಾರೆ ಎಂದು ಹೇಳಲಾಗುತ್ತಿತ್ತು. ಇದೀಗ ನಿರೀಕ್ಷೆಯಂತೆ ಫ್ರಾಂಚೈಸಿ ಅವರನ್ನು ಕೈಬಿಟ್ಟಿದೆ.