ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಯಲ್ ಎಸ್ಟೇಟ್ ಡೆವಲಪರ್ ಮತ್ತು ಆತನ ಪಾಲುದಾರರ ಬಳಿ 10 ಕೋಟಿ ಸುಲಿಗೆಗೆ ಯತ್ನಿಸಿದ ಆರೋಪದಡಿ ಭೂಗತ ಪಾತಕಿ ಛೋಟಾ ರಾಜನ್ ಗ್ಯಾಂಗ್ನ 5 ಮಂದಿಯನ್ನು ಬಂಧಿಸಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ಡೆವಲಪರ್ ಮತ್ತು ಅವರ ಪಾಲುದಾರರು ಮುಂಬೈ ಕ್ರೈಂ ಬ್ರಾಂಚ್ನ ಸುಲಿಗೆ ವಿರೋಧಿ ಸೆಲ್ಗೆ(ಎಇಸಿ) ದೂರು ನೀಡಿದ್ದರು.
10 ಕೋಟಿ ಹಣಕ್ಕಾಗಿ ನಿರಂತರ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಡೆವಲಪರ್ ಮತ್ತು ಅವರ ಪಾಲುದಾರರು 55 ಲಕ್ಷ ಪಾವತಿಸಿದ್ದರು. ಆದರೆ,ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಿ ಬೆದರಿಕೆ ಕರೆಗಳನ್ನು ಮಾಡುತ್ತಲೇ ಇದ್ದರು.
ಛೋಟಾ ರಾಜನ್ ಗ್ಯಾಂಗ್ ಸದಸ್ಯ ಗಣೇಶ್ ರಾಮ್ ಶೋರಾಡಿ ಅಲಿಯಾಸ್ ಡ್ಯಾನಿ (68) , ರೆಮಿ ಫೆರ್ನಾಂಡಿಸ್ (58), ಪ್ರದೀಪ್ ಯಾದವ್ (40), ಮನೀಶ್ ಭಾರದ್ವಾಜ್ (44), ಮತ್ತು ಶಶಿ ಯಾದವ್ (43) ಖರ್ಚಿಗಾಗಿ ₹5 ಲಕ್ಷ ಕೇಳಿದ್ದರು. ಹಣ ಪಡೆಯಲು ಬಾಂದ್ರಾ ವೆಸ್ಟ್ನಲ್ಲಿರುವ ಖಾಸಗಿ ಆಸ್ಪತ್ರೆಯೊಂದರ ಬಳಿ ಬರ ಹೇಳಿ ಸುಲಿಗೆಕೋರರನ್ನು ಕ್ರೈಂ ಬ್ರಾಂಚ್ನ ಎಇಸಿ ಬಂಧಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.