ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿ ಚಾಂಪಿಯನ್ಸ್ ಕೆಕೆಆರ್ (KKR) ಸ್ಟಾರ್ ಆಟಗಾರರನ್ನ ಹೊರದಬ್ಬಿದೆ. ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಬಿಕರಿಯಾಗಿದ್ದ ಮಿಚೆಲ್ ಸ್ಟಾರ್ಕ್ , ನಾಯಕ ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.
ರಿಂಕು, ರಸ್ಸೆಲ್, ರಾಣಾ ಸೇರಿಂದಂತೆ ಆಲ್‌ರೌಂಡರ್, ಬೌಲರ್‌ಗಳಿಗೆ ಮಣೆಹಾಕಿರುವ ಕೋಲ್ಕತ್ತಾ ನೈಟ್‌ರೈಡರ್ಸ್ ಇಬ್ಬರು ವಿದೇಶಿ ಆಟಗಾರರು ಸೇರಿದಂತೆ 6 ಆಟಗಾರರನ್ನು ಉಳಿಸಿಕೊಂಡಿದೆ. ಈ ಪೈಕಿ ಕಳೆದ ಆವೃತ್ತಿಯಲ್ಲಿ 55 ಲಕ್ಷ ರೂ. ಸಂಭಾವನೆ ಪಡೆದಿದ್ದ ರಿಂಕು ಸಿಂಗ್‌ಗೆ 13 ಕೋಟಿ ರೂ. ಕೊಟ್ಟು ಖರೀದಿ ಮಾಡಿರುವುದು ವಿಶೇಷ.
ಕೆಕೆಆರ್‌ನಲ್ಲಿ ಯಾರಿಗೆ ಎಷ ಉಳಿಕೆ?
* ರಿಂಕು ಸಿಂಗ್ – 13 ಕೋಟಿ ರೂ.
* ವರುಣ್ ಚಕ್ರವರ್ತಿ – 12 ಕೋಟಿ ರೂ.
* ಸುನೀಲ್ ನರೇನ್ – 12 ಕೋಟಿ ರೂ.
* ಆಂಡ್ರೆ ರಸ್ಸೆಲ್ – 12 ಕೋಟಿ ರೂ.
* ಹರ್ಷಿತ್ ರಾಣಾ – 4 ಕೋಟಿ ರೂ.
* ರಮಣದೀಪ್ ಸಿಂಗ್ – 4 ಕೋಟಿ ರೂ.