ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನಾಂಬೆ ದೇವಿಯ ದರ್ಶನಕ್ಕೆ ನೀಡಲಾಗುತ್ತಿದ್ದ ಪಾಸ್ ನ್ನು ನಿನ್ನೆ ರದ್ದು ಮಾಡಲಾಗಿತ್ತು, ರದ್ದಾಗಿದ್ದ ಹಾಸನಾಂಬೆ ದರ್ಶನದ ಟಿಕೆಟ್ ಕೌಂಟರ್’ ರನ್ನು ಮತ್ತೆ ರೀ ಓಪನ್ ಮಾಡಿದೆ. ಆನ್ ಲೈನ್ ಜೊತೆಗೆ ಆಫ್ ಲೈನ್ ನಲ್ಲಿ ಈಗ 300, 400 ರೂ ಬೆಲೆಯ ವಿಶೇಷ ಪಾಸ್ ಮಾರಾಟ ಮಾಡಲಾಗುತ್ತಿದೆ.
ತಡರಾತ್ರಿಯಿಂದ ಹಾಸನಾಂಬೆ ದೇವಾಲಯದ ಪಾಸ್’ ಕೌಂಟರ್ ರನ್ನು ಮತ್ತೆ ಓಪನ್ ಮಾಡಲಾಗಿದೆ. ಈ ವರ್ಷ ಭಾರಿ ಸಂಖ್ಯೆಯಲ್ಲಿ ಭಕ್ತರು ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದರಿಂದ ಸುಗಮದರ್ಶನಕ್ಕೆ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಹರಸಾಹಸ ನಡೆಸಿದೆ.
ಈ ಬಾರಿ 20 ಲಕ್ಷ ಮಂದಿ ಹಾಸನಾಂಬೆ ದೇವಿಯ ದರ್ಶನ ಪಡೆಯಬಹುದೆಂದು ಜಿಲ್ಲಾಡಳಿತ ಅಂದಾಜಿಸಿದ್ದರೂ ಅದಕ್ಕಿಂತಲೂ ಹೆಚ್ಚು ಜನ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರಿಂದ ಗೊಂದಲ ಉಂಟಾಯಿತು. ಜನರನ್ನು ನಿಯಂತ್ರಿಸುವುದೇ ಸವಾಲಾಗಿ ಪರಿಣಮಿಸಿದೆ.