ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ನಟ ಬೆನ್ನು ನೋವಿನಿಂದ ಬಳಲುತ್ತಿದ್ದರು ಮತ್ತು ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ನೀಡಲಾಗಿದೆ. ನಟ ದರ್ಶನ್ ಇಂದು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಷ್ಣುವರ್ಧನ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಂಗೇರಿ ಉತ್ತರಹಳ್ಳಿ ನಡುವಿನ ಖಾಸಗಿ ಆಸ್ಪತ್ರೆಗೆ ನಟನನ್ನು ದಾಖಲಿಸಲು ಯೋಜಿಸಲಾಗಿದ್ದು ಯಾವ ಆಸ್ಪತ್ರೆ ಎನ್ನುವುದು ಕನ್ಫರ್ಮ್ ಆಗಿಲ್ಲ.
ನಟ ದರ್ಶನ್ ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್, ಬಿಡುಗಡೆಯಾದ ವಾರದೊಳಗೆ ವೈದ್ಯಕೀಯ ವರದಿ ಸಲ್ಲಿಸುವಂತೆ ಷರತ್ತು ವಿಧಿಸಿತ್ತು. ಚಿಕಿತ್ಸೆಯ ವರದಿ, ಆಸ್ಪತ್ರೆಯ ವಾಸ್ತವ್ಯದ ವರದಿ, ನಿಗದಿತ ಆಪರೇಷನ್ ದಿನಾಂಕ ಮತ್ತು ಅನುಸರಣಾ ವರದಿಯನ್ನು ಸಲ್ಲಿಸುವಂತೆ ಕೋರ್ಟ್ ಅವರಿಗೆ ಸೂಚಿಸಿದೆ.