ಹೊಸದಿಗಂತ ಡಿಜಿಟಲ್ ಡೆಸ್ಕ್:
130 ರೂ. ಬಿಯರ್ ಬಾಟಲಿ ಬೆಲೆ 270 ರೂಪಾಯಿಗೆ ಏರಿಕೆಯಾಗಿದೆ. ಗಂಡ ಕುಡಿದು ಹೆಂಡತಿಗೆ ಗ್ಯಾರಂಟಿ ಕೊಡುತ್ತಾನಾ? ಎಂದು ಕಾಂಗ್ರೆಸ್ ವಿರುದ್ಧ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1ರಿಂದ 10ನೇ ತರಗತಿ ಮಕ್ಕಳಿಗೆ ಶಿಕ್ಷಣ ನೀಡಲು ಉಚಿತ ಶಿಕ್ಷಣ ನೀಡಬಹುದು. ಉಚಿತ ವೈದ್ಯಕೀಯ ಪರೀಕ್ಷೆ ಕೊಡಬಹುದಿತ್ತು. ತೋಚಿದ್ದನ್ನು ಮಾಡಿದ್ದಾರೆ. ಅದು ಜನರಿಗೆ ಬೇಕಾ? ಬೇಡವಾ? ಎಂಬುವುದನ್ನು ಯೋಚಿಸಿಲ್ಲ.
ಒಂದು ಬಿಯರ್ ಬಾಟಲು 130 ರೂ. ಇದ್ದಿದ್ದು 270 ರೂ. ಆಗಿದೆ. ಗಂಡನಿಗೆ ಹೆಂಡ ಕುಡಿಸಿ, ಹೆಂಡತಿಗೆ ಗ್ಯಾರಂಟಿ ಕೊಡೋದು ನ್ಯಾಯಾನಾ? ನಿಮಗೆ ಗ್ಯಾರಂಟಿ ಕೇಳಿದ್ದು ಯಾರು? ಎಂದು ಕಿಡಿಕಾರಿದ್ದಾರೆ.